ಸಿಡಿಲಿಗೆ ಸಾವು: ಪರಿಹಾರಕ್ಕೆ ಆಗ್ರಹ
ಗುಲ್ಬರ್ಗ: ಚಿತ್ತಾಪುರ ತಾಲೂಕಿನ ಹುಳಗೇರಾ ಗ್ರಾಮದ ರೈತನ ಮಗ ಜಗನ್ನಾಥ ಸಿಡಿಲು ಬಡಿದು ಅಸುನೀಗಿದ್ದರಿಂದ 15 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಸಿಪಿಎಂ ಪಕ್ಷವು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.
ಜಗನ್ನಾಥ ಸೂರ್ಯಕಾಂತ ನಾಯ್ಕೋಡಿ ಜು.7ರಂದು ತಮ್ಮ ಹೊಲದಲ್ಲಿ ಕೆಲಸ ಮಾಡುತ್ತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾನೆ. ಇವರು ಇನ್ಫಾರ್ಮೇಶನ್ ಸೈನ್ಸ್ನಲ್ಲಿ ಡಿಪ್ಲೋಮಾ ಮುಗಿಸಿ ನೌಕರಿಗೆ ಸೇರುವ ಹಂತದಲ್ಲಿದ್ದಾಗ ಈ ದುಘಟನೆ ಸಂಭವಿಸಿದೆ. ಅವರ ಕುಟುಂಬಕ್ಕೆ ರಾಜ್ಯ ಸರ್ಕಾರ ಕನಿಷ್ಠ 15 ಲಕ್ಷ ಪರಿಹಾರ ನೀಡಬೇಕೆಂದು ಸಿಪಿಎಂ ಒತ್ತಾಯಿಸಿದೆ.
ಪ್ರತಿಭಟನೆಯಲ್ಲಿ ಜಿಲ್ಲಾ ಮುಖಂಡ ಎಂ.ಬಿ. ಸಜ್ಜನ್, ಶರಣಬಸಪ್ಪ ಮುಮಶೆಟ್ಟಿ, ಅಶೋಕ ಮ್ಯಾಗೇರಿ ಸೇರಿದಂತೆ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.