'ಅಮೃತ ಸಿಂಚನ'ಕ್ಕೆ ಮಹ್ಮದ್ ಚಾಲನೆ
ಯಾದಗಿರಿ: ಜೈವಿಕ ಕ್ರಿಯೆಯ ಮೂಲಕ ಚರಂಡಿಯಲ್ಲಿನ ರೋಗಾಣುಗಳನ್ನು ನಾಶಪಡಿಸಲು ಹಮ್ಮಿಕೊಂಡಿರುವ 'ಅಮೃತ ಸಿಂಚನ' ಕಾರ್ಯಕ್ರಮಕ್ಕೆ ನಗರಸಭೆ ಅಧ್ಯಕ್ಷ ಮಹ್ಮದ್ ಇಸಾಕ್ ಚಾಲನೆ ನೀಡಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶಾ ವತಿಯಿಂದ ಘನ ಮತ್ತು ದ್ರವ ತ್ಯಾಜ್ಯ ನಿರ್ವಹಣಗೆ ಪರಿಸರ ಸ್ನೇಹಿ ತಂತ್ರಜ್ಞಾನವನ್ನು ನಗರದ ಲಾಡಿಸ್ ಬಡಾವಣೆಯಲ್ಲಿ ರಸ್ತೆಯ ಪಕ್ಕದ ಚರಂಡಿಯಲ್ಲಿ ಅಮೃತ ಸಿಂಚನ ಸಿಂಪಡಿಸುವ ಮೂಲಕ ಚಾಲನೆ ನೀಡಿದರು.
ನಗರಾಭಿವೃದ್ಧಿ ಕೋಶಾದ ಯೋಜನೆ ನಿರ್ದೇಶಕ ಎಸ್.ಪಿ. ನಂದಿಗಿರಿ ಮಾತನಾಡಿ, ಇದನ್ನು ನಿಂತ ನೀರು. ತ್ಯಾಜ್ಯದ ಮೇಲೆ ಈ ದ್ರಾವಣ ಸಿಂಪಡಿಸಿದರೆ ರೋಗಾಣುಗಳು ನಾಶವಾಗುತ್ತವೆ ಎಂದರು.
ಪರಿಸರ ಸಂಪನ್ಮೂಲ ವ್ಯಕ್ತಿ ಬಾಲಚಂದ್ರ ಜಾಬಶೆಟ್ಟಿ ಮಾತನಾಡಿದರು. ಬಂಡೆಪ್ಪ ಆಕಾಳ, ನಾರಾಣರಾವ್ ಚವ್ಹಾಣ, ರವಿಂದ್ರ ಕಾಂಬಳ್ಳೆ, ಹಿರಿಯ ಆರೋಗ್ಯ ನಿರೀಕ್ಷರು ಸಂತೋಷಕುಮಾರ ಸೇರಿದಂತೆ ಸಿಬ್ಬಂದಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.