ಗೋವಾ ಕನ್ನಡಿಗರ ರಕ್ಷಿಸಿ
ಯಾದಗಿರಿ: ಗೋವಾದ ವಾಸ್ಕೋದಲ್ಲಿ ವಾಸಿಸುವ ಕನ್ನಡಿಗರಿಗೆ ಸೂಕ್ತ ರಕ್ಷಣೆಗೆ ಹಾಗೂ ದೌರ್ಜನ್ಯ ಎಸಗಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೋವಾ ಸಿಎಂ ಮನೋಹರ ಪಾರಿಕರ್ ಅವರಿಗೆ ಜಿಲ್ಲಾಧಿಕಾರಿಗಳ ಮೂಲಕ ಕರವೇ ಮನವಿ ಸಲ್ಲಿಸಿತು.
ಗೋವಾದ ಸಮುದ್ರ ಪಕ್ಕದಲ್ಲಿ ಸೂಮಾರು 25 ವರ್ಷಗಳಿಂದ ಕನ್ನಡಿಗರು ವಾಸಿಸುತ್ತಿದ್ದಾರೆ. ಸರ್ಕಾರದ ಎಲ್ಲ ನಿಯಮಗಳ ಅನುಸಾರ ವಾಸಿಸುತ್ತಿದ್ದು, ಚುನಾವಣಾ ಗುರುತಿನ ಚೀಟಿ ಸೇರಿದಂತೆ ಗೋವಾ ರಾಜ್ಯದ ಎಲ್ಲ ಹಕ್ಕುಗಳನ್ನು ಹೊಂದಿದ್ದಾರೆ. ಆದರೂ ಅಲ್ಲಿನ ಅಧಿಕಾರಿಗಳು ಕನ್ನಡಿಗರು ವಾಸಿಸುವ 75 ಮನೆಗಳನ್ನು ಧ್ವಂಸಗೊಳಿಸಿರುವುದು ಖಂಡನೀಯ ಎಂದು ಕರವೇ ಜಿಲ್ಲಾಧ್ಯಕ್ಷ ಶರಣು ಗದ್ದುಗೆ ಆಗ್ರಹಿಸಿದ್ದಾರೆ.
ಅದಲ್ಲದೇ ಗೋವಾ ರಾಜ್ಯದ ಜನರು ಸಹ ನಮ್ಮ ರಾಜ್ಯದಲ್ಲಿ ಇದ್ದಾರೆ ಎಂಬುವುದು ಮರೆಯಬಾರದು. ಕೂಡಲೇ ಅವರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.
ಶರಣು ಇಟಗಿ, ದೇವು ಪಾಟೀಲ, ಸಿದ್ದುರೆಡ್ಡಿ ತಂಗಡಗಿ, ಬಾಪುಗೌಡ, ರವಿ, ಖಾಸಿಮ, ಸಿದ್ದು, ಶೀನು, ಶರಣು ದೇವು ಮತ್ತಿತರರು ಇದ್ದರು.