ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃಷಿ ನಿರ್ದೇಶಕರಿಂದ ಬತ್ತ ಬಿತ್ತನೆ ವೀಕ್ಷಣೆ

Rashmi Kasaragodu
Updated On : 20 Jul 2014, 1:43 am

ಹುಣಸಗಿ: ತಾಲೂಕಿನ ಕಾಮನಟಗಿ ಗ್ರಾಮ ಸರ್ವೇಶರಾವ್ ರೈತನ ಹೊಲಕ್ಕೆ  ಜಿಲ್ಲಾ ಜಂಟಿ ಕೃಷಿ ನಿರ್ದೇಶಕಿ ಡಾ ಚೇತನಾ ಪಾಟೀಲ್ ಭೇಟಿ ನೀಡಿ ಕೂರಿಗೆ ಮೂಲಕ ಬತ್ತ ಬಿತ್ತನೆಯನ್ನು ವೀಕ್ಷಿಸಿದರು. ನಂತರ ಮಾತನಾಡಿ, ಬತ್ತದ ಫಸಲು ಬರುವವರೆಗೆ ಪ್ರತಿ ಹದಿನೈದು ದಿವಸಗಳಿಗೊಮ್ಮೆ ಈ ಹೊಲವನ್ನು ಕ್ಷೇತ್ರ ಪಾಠಶಾಲೆಯಾಗಿ ಬಳಕೆ ಮಾಡುವಂತೆ ಸುರಪುರ ಪ್ರಭಾರಿ ಸಹಾಯಕ ಕೃಷಿ ನಿರ್ದೇಶಕ ಕೇಸರಸಿಂಗ ಹಜೇರಿ ಅವರಿಗೆ ಸೂಚಿಸಿದರು. ಅಕ್ಕ ಪಕ್ಕದ ಹಳ್ಳಿಗಳ ರೈತರನ್ನು ಇಲ್ಲಿಗೆ ತಂದು ಭೇಟಿ ಮಾಡಿಸಬೇಕು ಎಂದು ತಿಳಿಸಿದರು. ಬತ್ತವನ್ನು ನೇರವಾಗಿ ಬಿತ್ತನೆ ಮಾಡಿದರೆ, ನೀರು, ಗೊಬ್ಬರದ ಖರ್ಚು ಕಡಿಮೆಯಾಗುವುದು. ಕೃಷಿ ಕಾರ್ಮಿಕರ ಬಳಕೆ ಮತ್ತು ಸಮಯ, ಹಣದ ಉಳಿತಾಯವಾಗಲಿದೆ ಎಂದರು. ರಾಷ್ಟ್ರೀಯ ಅಹಾರ ಭದ್ರತಾ ಯೋಜನೆ ಫಲಾನುಭವಿಗಳಿಗೆ ಬಿತ್ತನೆಯಿಂದ ರೈತರಿಗೆ ಆಗುವ ಲಾಭ-ನಷ್ಟ ಮತ್ತು ನ್ಯೂನತೆಗಳನ್ನು ಅಧ್ಯಯನ ಮಾಡಲಾಗುವುದು ಎಂದು ನಿರ್ದೇಶಕಿ ಡಾ. ಚೇತನಾ ಹೇಳಿದರು. ಗ್ರಾಮದ ರೈತ ಸರ್ವೇಶರಾವ್, ನರಸಿಂಹರಾವ್ ಜಹಗೀರದಾರ್, ಶಿವರಾಜಗೌಡ ಮೇಟಿ, ರವಿಂದ್ರ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement