ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡೆಂಘೀ ಪತ್ತೆ: ಕುಟುಂಬದವರು ರಕ್ತ ಪರೀಕ್ಷೆ

Rashmi Kasaragodu
Updated On : 20 Jul 2014, 1:40 am

ಶಹಾಬಾದ್: ನಗರದ ವಾರ್ಡ್ 20ರ ಮಿಲತ್ ನಗರದಲ್ಲಿ ಕೆಲ ದಿನಗಳ ಹಿಂದೆ ಮಹ್ಮದ್ ವಾಸಿಂ (24) ಯುವಕನಿಗೆ ಡೆಂಘೀ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಗರದ ಸರ್ಕಾರಿ ಆಸ್ಪತ್ರೆ ವತಿಯಿಂದ ಕುಟುಂಬದವರ ರಕ್ತ ಪರೀಕ್ಷೆಯನ್ನು ಶುಕ್ರವಾರ ನಡೆಸಿದರು. ವಾಸಿಂ ಮನೆಗೆ ಭೇಟಿ ನೀಡಿದ ಆಸ್ಪತ್ರೆ ಸಿಬ್ಬಂದಿ ಈ ಸೊಂಕು ಮನೆಯವರಿಗೆ ಹರಡಿದೆಯೇ ಎಂಬ ಬಗ್ಗೆ ಕುಟುಂಬದವರ ರಕ್ತ ತಪಾಸಣೆಗಾಗಿ ರಕ್ತ ಸಂಗ್ರಹಿಸಿದರು. ಪ್ರಯೋಗಾಲಯ ತಜ್ಞ ಕೌಸರ್ ಮಹ್ಮದ್ ಮಾತನಾಡಿ, ವಾಸಿಂ ಈ ಮೊದಲು ಬೆಂಗಳೂರಿನಲ್ಲಿ ಇದ್ದು, ಅಲ್ಲಿ ಇದ್ದಾಗಲೇ ಆತನಿಗೆ ಜ್ವರ ಕಾಣಿಸಿಕೊಂಡಿದ್ದರಿಂದ ಮನೆಗೆ ಹಿಂತಿರುಗಿದ್ದಾನೆ. ಇಲ್ಲಿ ಹೆಚ್ಚಿನ ಚಿಕಿತ್ಸೆ ನಡೆಸಿದಾಗ ಆತನಿಗೆ ಡೆಂಘೀ ಇರುವ ಬಗ್ಗೆ ಕಂಡು ಬಂದಿತು ಎಂದು ಪತ್ರಿಕೆಗೆ ಮಾಹಿತಿ ನೀಡಿದರು. ಸರಕಾರಿ ವೈದ್ಯಕೀಯ ಸಿಬ್ಬಂದಿಗಳಾದ ಜಯಶ್ರೀ, ಕಿರಿಯ ಆರೋಗ್ಯ ಸಹಾಯಕ ಯೂಸೂಫ್ ಇದ್ದರು.


ಹದಗೆಟ್ಟ ರಸ್ತೆ ದುರಸ್ತಿಗೆ ಕನ್ನಡ ಸೇನೆ ಒತ್ತಾಯ


ಗುಲ್ಬರ್ಗ: ನಗರದ ವಾರ್ಡ್ 20, 21, ಮತ್ತು 22ರಲ್ಲಿ ರಸ್ತೆಗಳು ಸಂಪೂರ್ಣ ಹದಗೆಟ್ಟಿವೆ. ಮಳೆಗಾಲದಲ್ಲಿ   ಚರಂಡಿ ನೀರು ರಸ್ತೆಯ ಮೇಲೆ ನಿಂತಿರುವುದರಿಂದ ಶಾಲಾ- ಕಾಲೇಜು ಮಕ್ಕಳು, ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ಜಿಲ್ಲಾ ಘಟಕ ಆರೋಪಿಸಿದೆ. ನಿಂತ ನೀರಿನಿಂದ ಜನರಿಗೆ ರೋಗ ಹರಡುವ ಸಂಭವವಿರುತ್ತದೆ. ಆದ್ದರಿಂದ ರಸ್ತೆಗಳನ್ನು ಬೇಗನೆ ದುರಸ್ತಿ ಮಾಡಿ ಜನರಿಗೆ ಹಾಗೂ ಶಾಲಾ ಮಕ್ಕಳಿಗೆ ನೆಮ್ಮದಿಯಾಗಿ ಸಂಚರಿಸಲು ಅನುಕೂಲ ಮಾಡಬೇಕು. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಮಹಾನಗರ ಪಾಲಿಕೆಯ ಸದಸ್ಯರು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕು. ಒಂದು ವೇಳೆ ಕಾಮಗಾರಿ ಬೇಗನೆ ಪ್ರಾರಂಭ ಮಾಡದಿದ್ದರೆ ಕನ್ನಡ ಸೇನೆ ಕರ್ನಾಟಕ ಜಿಲ್ಲಾಧ್ಯಕ್ಷ ಮೋದಿನ್ ಪಟೇಲ್ ಅಣಬಿ ನೇತೃತ್ವದಲ್ಲಿ ಮಹಾನಗರ ಪಾಲಿಕೆ ವಿರುದ್ಧ ಹೋರಾಟ ಮಾಡಬೇಕಾಗುತ್ತದೆ ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಒತ್ತಾಯಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಮೋದಿನ್ ಪಟೇಲ್ ಅಣಬಿ ಸೇರಿದಂತೆ ಇತರ ಕಾರ್ಯಕರ್ತರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement