ಮದ್ಯದಂಗಡಿಗೆ ಅನುಮತಿ ಬೇಡ
ಯಾದಗಿರಿ: ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಹತ್ತಿರ ಮದ್ಯದ ಅಂಗಡಿ ಡಾಬಾ ನಡೆಸುವುದಕ್ಕೆ ಅನುಮತಿ ನೀಡಬಾರದು ಎಂದು ಆಗ್ರಹಿಸಿ ಮಹರ್ಷಿ ವಾಲ್ಮೀಕಿ ಗ್ರಾಮೀಣ ಅಭಿವೃದ್ಧಿ ಜನಸೇವಾ ಯುವಕರ ಸಂಘ ಹಾಗೂ ಡಿಎಸ್ಎಸ್ ಜಿಲ್ಲಾಧಿಕಾರಿಗಳಿಗೆ ಶನಿವಾರ ಮನವಿ ಸಲ್ಲಿಸಿತು. ಹೊಸಕೇರಾ ಗ್ರಾಮದ ಹತ್ತಿರವೇ ಮದ್ಯದ ಅಂಗಡಿ ತೆಗೆಯಲಾಗುತ್ತಿದ್ದು, ಇಲ್ಲಿ ಸುತ್ತಮುತ್ತ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಹಾಗೂ ಇನ್ನಿತರ ಇರುವುದಿಂದ ಗ್ರಾಮದ ಜನರಿಗೆ ಬಹಳಷ್ಟು ತೊಂದರೆ ಉಂಟಾಗುತ್ತದೆ. ಸಾರ್ವಜನಿಕ ಹಿತದೃಷ್ಟಿಯಿಂದ ಈ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ಕೊಡಬಾರದು ಎಂದು ಆಗ್ರಹಿಸಿದ್ದಾರೆ.