ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಗಿಡಗೋಳಿಂದ್ಲೇ ಗಾಳಿ- ಮಳಿ, ಬಾಳು ಹಸನು

Mainashree
Updated On : 21 Jul 2014, 10:12 am

ಗುಲ್ಬರ್ಗ: ಗಿಡಗೋಳು ಹಚ್ಚುವುದರಿಂದ ಅವು ದೊಡ್ಡುವಾಗಿ ನಮಗ ಉಸಿರಾಡಾಕ ಗಾಳಿ, ಕುಂದರಲಿಕ್ಕ ನೆರಳ, ಮತ್ತ ಉರಲಿಕ್ಕ ಕಟಗಿ ಕೊಡತಾವರಿ, ಗಿಡ ಇದ್ರನೇ ಮಳಿ ಬರ್ತದ್ರಿ ಎಂದು ಗುಲ್ಬರ್ಗ ತಾಲೂಕಿನ ಕಾಡನಾಳ ಗ್ರಾಮದ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯ 7ನೇ ತರಗತಿಯ ಬಾಲಕಿ ಅಂಜುಮ್ ಮಾಲಿಪಾಟೀಲ್ ಹೇಳಿದಳು.
ಗುಲ್ಬರ್ಗ ತಾಲೂಕಿನ ಕಾಡನಾಳ ಗ್ರಾಮದ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಭಾನುವಾರ ಶಾಲಾ ಮಕ್ಕಳು ಮತ್ತು ಶಿಕ್ಷಕರಿಂದ ಏರ್ಪಡಿಸಿದ್ದ ಸಸಿ ನೆಡುವ ಕಾರ್ಯಕ್ರಮಕ್ಕೆ ಜೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಪಲ್ಲವಿ ಆಕುರಾತಿ ಚಾಲನೆ ನೀಡಿ, ಮಕ್ಕಳೊಂದಿಗೆ ಸಂವಾದ ನಡೆಸಿದ ಸಂದರ್ಭದಲ್ಲಿ ಬಾಲಕಿ ತನ್ನ ಒಳತಿಳಿವನ್ನು ವ್ಯಕ್ತಪಡಿಸಿದಳು.
ಸಾಕು ಪ್ರಾಣಿಗಳಾದ ನಾಯಿ, ಬೆಕ್ಕುಗಳಿಗೆ ಪ್ರೀತಿಯಿಂದ ಪೋಷಣೆ ಮಾಡುವ ಹಾಗೆ ಮರಗಳಿಗೂ ಪೋಷಣೆ ಮಾಡಬೇಕು. ಎಲ್ಲ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಒಂದೊಂದು ಗಿಡ ನೆಡಬೇಕು. ಪೋಷಕರಿಗೆ ಗಿಡಗಳ ಮಹತ್ವ ತಿಳಿಸಿಕೊಡಬೇಕು. ಗಿಡಗಳನ್ನು ಹಚ್ಚುವ ಮೂಲಕ ಹಸಿರು ಸೈನಿಕರಾಗಿ ಪರಿಣಮಿಸಬೇಕೆಂದು ವಿದ್ಯಾರ್ಥಿಗಳಿಗೆ ಪಲ್ಲವಿ ಆಕುರಾತಿ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಜಸೈನಿ ಕೋಚಿಂಗ್ ಸೆಂಟರ್‌ನ ಅಜರಾ ಶೇಖ್, ಗ್ರಾಮಸ್ಥರಾದ ಪ್ರಕಾಶ, ಇಮಾಮ ಪಟೇಲ್, ಬಸಮ್ಮ ಸಸಿ, ಚೆನ್ನಬಸಯ್ಯ ಸ್ವಾಮಿ, ಬಾಷಾ ಪಟೇಲ್, ಜಗದೀಶ ಆವಟೆ, ಓಂಕಾರ ಇದ್ದರು.
ನಮ್ಮೂರ ಶಾಲೆಗೆ ಕರೆಂಟ್ ಸಂಪರ್ಕ ಇಲ್ರಿ
ಜೆಸ್ಕಾಂ ವ್ಯವಸ್ಥಾಪಕ ನಿರ್ದೇಶಕಿ ಪಲ್ಲವಿ ಆಕುರಾತಿ ಭಾನುವಾರ ವನಮಹೋತ್ಸವಕ್ಕಾಗಿ ಭೇಟಿ ನೀಡಿದ್ದ ಕಾಡನಾಳ ನಮ್ಮೂರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕರೆಂಟ್ ಸಂಪರ್ಕವೇ ಇರಲಿಲ್ಲ. ಈ ಶಾಲೆಗೆ ಆರಂಭದಿಂದಲೂ ಕರೆಂಟ್ ಇಲ್ಲ ಎಂದು ಅಧ್ಯಕ್ಷತೆ ವಹಿಸಿದ್ದ ಶಾಲೆಯ ಮುಖ್ಯಗುರು ಶಬ್ಬೀರ್ ಬಾಷಾ ಬಹಿರಂಗವಾಗಿಯೇ ಹೇಳಿಕೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement