ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾಮುಕನಿಗೆ ಕಠಿಣ ಶಿಕ್ಷೆ ನೀಡಿ

Rashmi Kasaragodu
Updated On : 22 Jul 2014, 11:31 am

ಬಾಲಕಿಗೆ ಜೀವನ ಪರ್ಯಂತ ಸರ್ಕಾರ ಪಿಂಚಣಿ ಕಲ್ಪಿಸಲಿ
ಜೇವರ್ಗಿ: ತಾಲೂಕಿನ ಕಾಸರಭೋಸಗಾ ಗ್ರಾಮದಲ್ಲಿ ಜು.17ರಂದು ಬಾಲಕಿಯ ಮೇಲೆ ನಡೆದ ಅತ್ಯಾಚಾರ ಘಟನೆ ಖಂಡಿಸಿ ಗ್ರಾಮಸ್ಥರು ಸೋಮವಾರ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಬಿಜೆಪಿ ಮುಖಂಡ ಹಳ್ಳೆಪ್ಪಾಚಾರ್ಯ ಜೋಶಿ, ಕಾಸರಭೋಸಗಾದಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿರುವುದು ಖಂಡನೀಯ. ಮುಂದಿನ ದಿನಗಳಲ್ಲಿ ಇಂಥಹ ಘಟನೆಗಳು ಮರುಕಳಿಸಿದಂತೆ ತಾಲೂಕು ಆಡಳಿತ ಹಾಗೂ ಪೊಲೀಸ್ ಇಲಾಖೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅತ್ಯಾಚಾರ ನಡೆಸಿದ ವ್ಯಕ್ತಿಗೆ ಕಠಿಣ ಶಿಕ್ಷೆಯಾಗಬೇಕು. ಅತ್ಯಾಚಾರಕ್ಕೆ ಒಳಗಾದ ಬಾಲಕಿಯ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಿ ಕೊಡಬೇಕು.
ರಕ್ಷಣೆ, ಸಹಾಯಧನಕ್ಕೆ ಒತ್ತಾಯ: ಅನ್ಯಾಯವಾದ ಬಾಲಕಿಗೆ ಜೀವನ ಪರ್ಯಂತ ಸರ್ಕಾರದಿಂದ ಪಿಂಚಣಿ ನೀಡಬೇಕು. ಬಾಲಕಿಯ ಪೋಷಕರಿಗೆ ಸರ್ಕಾರದಿಂದ 5 ಲಕ್ಷ ಸಹಾಯ ಧನ ನೀಡಬೇಕು. ಮುಂಬರುವ ದಿನಗಳಲ್ಲಿ ತಪ್ಪಿತಸ್ಥರು ಬಾಲಕಿಯ ಕುಟುಂಬ ವರ್ಗದವರಿಗೆ ಹಾಗೂ ಬಾಲಕಿಯ ಪಾಲಕರ ಮೇಲೆ ಹಲ್ಲೆ ನಡೆಸುವ ಸಂಭವ ಇರುವುದರಿಂದ ಅವರಿಗೆ ಪೊಲೀಸ ರಕ್ಷಣೆ ನೀಡಬೇಕೆಂದು ಜೋಶಿ ಆಗ್ರಹಿಸಿದರು.
ಇದಕ್ಕೂ ಮುನ್ನ ಗ್ರಾಮಸ್ಥರು ಪಟ್ಟಣದ ಪ್ರವಾಸಿ ಮಂದಿರದಿಂದ ಮಿನಿ ವಿಧಾನಸೌಧದವರೆಗೆ ಕಪ್ಪು ಬಟ್ಟೆ ಧರಿಸಿ ಮೌನ ಮೆರವಣಿಗೆ ನಡೆಸಿದರು. ನಂತರ ತಹಸೀಲ್ದಾರ್ ಎಂ.ಎನ್. ಚೋರಗಸ್ತಿ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಪ್ರತಿಭಟನೆಯಲ್ಲಿ ಸಾಯಬಣ್ಣ ದೊಡ್ಡಮನಿ, ಈರಣ್ಣ ಸಾಹು ಕೋರಿ, ಮಹಾಂತಪ್ಪ ಗುತ್ತರಗಿ, ಶಿವಶರಣಪ್ಪ ಗುತ್ತರಗಿ, ಮಹಾಂತಪ್ಪ ಕೋರಿ, ಹಣಮಂತರಾಯ ಚೌಡಾಪುರ, ರಾಜಕುಮಾರ ನಡಗೇರಿ, ಅಶೋಕ ಯರಗಲ್, ದೇಸುನಾಯಕ ಚವ್ಹಾಣ, ಮಲ್ಕಣ್ಣ ಕೋರಿ, ಅಯ್ಯಣ್ಣ ಬೆಂಡೆಗುಂಬಳ, ಭೀಮಣ್ಣ ದೇಸಾಯಿ, ಗುರಪ್ಪ ಮಲ್ಲೇದ್, ಮಾಳಪ್ಪ ಪೂಜಾರಿ ಸೇರಿದಂತೆ ಕಾಸರಭೋಸಗಾ ಗ್ರಾಮಸ್ಥರು ಪಾಲ್ಗೊಂಡಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement