ನ್ಯಾ. ಸದಾಶಿವ ವರದಿ ಅನುಷ್ಠಾನಗೊಳಿಸಿ
ಗುಲ್ಬರ್ಗ: ನ್ಯಾ. ಸದಾಶಿವ ವರದಿ ಅನುಷ್ಠಾನಗೊಳಿಸಿ ಪರಿಶಿಷ್ಟ ಜಾತಿಗಳಿಗೆ ಜನಸಂಖ್ಯಾವಾರು ಮೀಸಲು ವರ್ಗೀಕರಣ ಸೇರಿ ನಾನಾ ಬೇಡಿಕೆ ಈಡೇರಿಕೆಗೆ ಮಾದಿಗ ಮೀಸಲಾತಿ ಹೋರಾಟ ಸಮಿತಿ ಆಗ್ರಹಿಸಿದೆ. ನ್ಯಾ. ಸದಾಶಿವ ವರದಿ ಯಥಾವತ್ತಾಗಿ ಅಂಗೀಕರಿಸಬೇಕು. ಬ್ಯಾಕ್‌ಲಾಗ್ ಹುದ್ದೆ ಭರ್ತಿಗೊಳಿಸಬೇಕು. ಮಹಾನಗರ ಪಾಲಿಕೆ, ನಗರಸಭೆ ಹಾಗೂ ಪುರಸಭೆಯಲ್ಲಿರುವ ಎಲ್ಲಾ ದಿನಗೂಲಿಗಳನ್ನು ಕಾಯಂಗೊಳಿಸಿ ಗುತ್ತಿಗೆ ಪದ್ದತಿ ರದ್ದುಪಡಿಸಬೇಕು. ಪ್ರತ್ಯೇಕ ನಿಗಮ ಸ್ಥಾಪಿಸಬೇಕು. ಪ್ರತಿವರ್ಷ ಈ ಜಾತಿಗಳ ಪ್ರಗತಿ ಪರಿಶೀಲನೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಲಾಯಿತು. ಸಮಿತಿಯ ಸದಸ್ಯರು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಮಾನೇಶ ಬಿಲ್ಲವ, ಮಲ್ಲಪ್ಪ ಚಿಗಾನೂರ, ಶರಣಪ್ಪ ಉದನೂರಕರ್, ದಶರಥ ಕಲಗುರ್ತಿ ಹಾಗೂ ದೇವೇದ್ರ ಪಾಲ್ಗೊಂಡಿದ್ದರು.