ಅಧಿಕಾರಿಗಳ ವರ್ಗಾವಣೆ ಯುವಸೇನೆ ಆಗ್ರಹ
ಯಾದಗಿರಿ: ನಗರದ ಜಿಲ್ಲಾ ಆಸ್ಪತ್ರೆಯಲ್ಲಿ ಲ್ಯಾಬ್ ಮತ್ತು ಎಕ್ಸ್ ರೇ ಮಾಡುವ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಯುವ ಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯವಿದ್ದರೂ ಬಡ ರೋಗಿಗಳಿಗೆ ಲ್ಯಾಬ್ ಮತ್ತು ಏಕ್ಸ್ ರೇ ಸೌಲಭ್ಯ ನೀಡದೇ ತಮ್ಮ ಖಾಸಗಿ ಲ್ಯಾಬ್ಗಳಿಗೆ ಬರಮಾಡಿಕೊಂಡು ಅವರಿಂದ ಹಣ ಪಡೆಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ರೋಗಿಗಳ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಇಂತಹ ಭಷ್ಟ್ರ ಅಧಿಕಾರಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಅವರು ಆಗ್ರಹಿಸಿದ್ದಾರೆ. ಜಿಲ್ಲಾಧ್ಯಕ್ಷ ರವಿ ಕೆ. ಮುದ್ನಾಳ, ಖುದ್ದೂಸ್, ನಿರಂಜನ್ ಎಸ್.ಕೆ, ರಾಜು ಪವಾರ್, ಚಂದು ರಾಠೋಡ್ ಲಕ್ಷ್ಮಣ ಪವಾರ, ವಿರೇಶ ಮುದ್ನಾಳ, ಶಿವರಾಜ ಪಾಟೀಲ್, ಅರ್ಜುನ ಪವಾರ್, ಸುಧೀರ್, ಆಕಾಶ ಪವಾರ್, ಆಕಾಶ ಜಾಧವ್, ಅರ್ಜುನ ಚವ್ಹಾಣ, ಸಂಪತ್ಕುಮಾರ ಇದ್ದರು.