ಮಹಿಳಾ ದೌರ್ಜನ್ಯ ಕಡಿವಾಣಕ್ಕೆ ಕ್ರಮ: ಪಟ್ಟೇದ್
ಸುರಪುರ: ರಾಜ್ಯದಲ್ಲಿ ದಿನ ನಿತ್ಯವೂ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ, ದೌರ್ಜನ್ಯ ಪ್ರಕರಣಗಳಿಗೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಲು ನಿರ್ಧರಿಸಿದ್ದು, ಜನಜಾಗೃತಿ ಸಭೆ ನಡೆಸುತ್ತಿದೆ ಎಂದು ಪಿಎಸ್ಐ ಹಣಮಂತ ಪಟ್ಟೇದ್ ಹೇಳಿದರು.
ಪಟ್ಟಣದ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಅಂಗನವಾಡಿ ಮೇಲ್ವಿಚಾರಕಿಯರಿಗೆ ಮತ್ತು ಕಾರ್ಯಕರ್ತೆಯರಿಗೆ ಅತ್ಯಾಚಾರ ಮತ್ತು ಲೈಂಗಿಕ ದೌರ್ಜನ್ಯ ತಡೆ ಕುರಿತು ಅರಿವು ಮೂಡಿಸಿದರು.
ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕೆಲಸ ಮಾಡುವ ಅಂಗನವಾಡಿ ಮೇಲ್ವಿಚಾರಕಿ ಮತ್ತು ಕಾರ್ಯಕರ್ತೆಯರು ಎಲ್ಲಿಯಾದರೂ ಮಹಿಳೆಯರ ಮೇಲೆ ದೌರ್ಜನ್ಯ ಕಂಡುಬಂದರೆ ತಕ್ಷಣ ಪೊಲೀಸ್ ಅಧಿಕಾರಿ, ಠಾಣೆ ಅಥವಾ ಸಿಡಿಪಿಒಗೆ ತಿಳಿಸಬೇಕು ಎಂದು ಸಲಹೆ ನೀಡಿದರು.
ಸುರಪುರ ಪೊಲೀಸ್ ಠಾಣೆ(08473- 256030), ಯಾದಗಿರಿ ಕಂಟ್ರೋಲ್ ರೂಂ(08473- 253778) ಮತ್ತು ಟೋಲ್ ಫ್ರಿ ನಂಬರ್- 100ಕ್ಕೆ ಕರೆ ಮಾಡಬೇಕು ಎಂದು ಹೇಳಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ದೇನುಸಿಂಗ ಚವ್ಹಾಣ ಮಾತನಾಡಿದರು. ಮೇಲ್ವಿಚಾರಕಿಯರಾದ ಸತ್ಯಮ ಡಿ.ಎಚ್, ಚಂದ್ರಲೀಲಾ ನಿಂಬೂರ್, ಗುರುದೇವಿ ಹಿರೇಮಠ, ಶೋಭಾ ಸಜ್ಜನ್, ಪಾರ್ವತಿ ಕಡಿ, ಶಶಿಕಲಾ ಗಾಳಿ, ಸಂಗಮ್ಮ ಹಾವೇರಿ, ಶಾಂತಮ್ಮ, ಸುನೀತಾ ಪಾಟೀಲ್, ಸರೋಜಿನಿ, ಪದ್ಮಾವತಿ ಇದ್ದರು.