ಯುವಕನಿಂದ ಅತ್ಯಾಚಾರಕ್ಕೆ ಯತ್ನ
ಚಿಂಚೋಳಿ: ತಾಲೂಕಿನ ಹಸರಗುಂಡಗಿ ಗ್ರಾಮದಲ್ಲಿ ಶನಿವಾರ ಮಹಿಳೆಯೊಬ್ಬಳು ಮಧ್ಯಾಹ್ನ ಹಳ್ಳದಲ್ಲಿ ಬಟ್ಟೆ ಒಗೆಯುತ್ತಿದ್ದಾಗ ಯುವಕನೊಬ್ಬನು ಅತ್ಯಾಚಾರಕ್ಕೆ ಯತ್ನಿಸಿದ್ದಾನೆಂದು ಚಿಂಚೋಳಿ ಠಾಣೆ ಪ್ರಭಾರ ಪಿಎಎಸೈ ರಾಘವೇಂದ್ರ ತಿಳಿಸಿದ್ದಾರೆ. ಹಸರಗುಂಡಗಿ ಗ್ರಾಮದ 45 ವರ್ಷದ ಮಹಿಳೆ ಹಳ್ಳದಲ್ಲಿ ಮಧ್ಯಾಹ್ನ ಬಟ್ಟೆ ಒಗೆಯುತ್ತಿದ್ದಾಗ ಅದೇ ಗ್ರಾಮದ ಸರ್ಕಾರಿ ಪ್ರೌಢಶಾಲೆಯ 9ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದ ನವೀನ್ ಅರ್ಜುನ ಮೆಗಿ(16) ಎಂಬ ಯುವಕ ಮಹಿಳೆ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿದ್ದಾನೆ. ಮಹಿಳೆ ಕೂಡಲೇ ಕೂಗಿಕೊಂಡಾಗ ಅಲ್ಲಿಂದ ಪರಾರಿಯಾಗಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ಬಂಧನಕ್ಕಾಗಿ ವಿಶೇಷ ತಂಡ ರಚಿಸಲಾಗಿದೆ. ಮಹಿಳೆ ನೀಡಿದ ದೂರಿನ ಮೇರೆಗೆ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.