ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಒಪ್ಪಿಗೆ ಪಡೆದೇ ವಿಗ್ರಹ ಸ್ಥಳಾಂತರ

Rashmi Kasaragodu
Updated On : 24 Jul 2014, 11:37 am

ಹುಣಸಗಿ: ಗ್ರಾಮದಲ್ಲಿ ಜೈನ ಸಮುದಾಯವೇ ಇಲ್ಲ. ಹೀಗಾಗಿ ಮೂರ್ತಿ ಪೂಜೆ ಇಲ್ಲದೆ, ಇಲ್ಲಿಯ ಬಾಲಕರು ಅದನ್ನು ಹಾಳುಗೆಡುವುತ್ತಿದ್ದರು. ಅದಕ್ಕೆ ಅಲ್ಲಿ ನಿತ್ಯ ಪೂಜೆಯಾದರೂ ಆಗಲಿ ಎಂಬ ಉದ್ದೇಶದಿಂದ ಬಾಗಲಕೋಟೆಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಈ ಕುರಿತು ಗ್ರಾಮಸ್ಥರಿಂದ ಹೇಳಿಕೆ ಕುರಿತ ದಾಖಲೆ ಪಡೆಯಲಾಗಿದೆ ಎಂದು ತಹಸೀಲ್ದಾರ್ ಅರುಣಕುಮಾರ್ ಕುಲಕರ್ಣಿ ಎಂದು ತಿಳಿಸಿದರು.
 ಕಳೆದ ಒಂದು ವಾರದಿಂದ ಜೈನ ಬಸದಿಯ ನೇಮಿನಾಥ ವಿಗ್ರಹವನ್ನು ಬಾಗಲಕೋಟೆಯಿಂದ ವಾಪಸ್ ತರಿಸುವಂತೆ ಒತ್ತಾಯಿಸಿ ನಡೆದ ಪ್ರತಿಭಟನೆ ಫಲವಾಗಿ ಕೊನೆಗೂ ಗ್ರಾಮಕ್ಕೆ ಭೇಟಿ ನೀಡಿ ಮಾತನಾಡಿದರು.
  ಈ ಬಸದಿಯು ಪುರಾತತ್ವ ಇಲಾಖೆಗೆ ಹಸ್ತಾಂತರಿಸಬೇಕು. ಈ ಕುರಿತು ಸರ್ಕಾರಕ್ಕೆ ಸೂಕ್ತ ಕ್ರಮಕ್ಕೆ ವರದಿ ನೀಡಲಾಗಿತ್ತು ಎಂದು ಹೇಳಿದರು.
  ಹುಣಸಗಿ ವಿಶೇಷ ತಹಸೀಲ್ದಾರ್ ಸುರೇಶ ಚವರ್ಲಕರ್, ಕಂದಾಯ ನಿರೀಕ್ಷಕ ಬಸವಲಿಂಗಪ್ಪ, ಗ್ರಾಮ ಲೆಕ್ಕಿಗ ಅಮರೇಶ ಮಾಲಗತ್ತಿ ಇದ್ದರು.
  ಸರ್ಕಾರಿ ದಾಖಲೆಗಳಿಂದಲೇ ನೇರವಾಗಿ ಸ್ಥಳಾಂತರಿಸಲಾಗಿದೆ ಎಂಬ ಮೇಲೆ ಜಿಲ್ಲಾಧಿಕಾರಿಗಳು ಹೇಳಿಕೆ ನೀಡುವಲ್ಲಿ ಏಕೆ ಹಿಂಜರಿದರು, ಈ ಹೇಳಿಕೆ ನೀಡಲು ಇಷ್ಟು ವಿಳಂಬ ನೀತಿ ಅನುಸರಿಸಿದ್ದು ಏಕೆ ಎಂಬ ಪ್ರಶ್ನೆ ಸ್ಥಳೀಯರಲ್ಲಿ ಕಾಡುತ್ತಿದೆ.
  ಇನ್ನು ಪಂಚಾಯತಿಯವರು ಪತ್ರ ಬರೆದು ಕೊಟ್ಟರೆ ಯಾರು ಬೇಕಾದರೂ ಯಾವ ಗ್ರಾಮದವರು, ಎಲ್ಲಿ ಬೇಕಾದರೂ ಮೂರ್ತಿಗಳನ್ನು (ನಾಪತ್ತೆ) ಹಸ್ತಾಂತರ ಮಾಡಬಹುದೆ ಎಂದು ಜನತೆ ಅವರವರಲ್ಲಿಯೇ ಗುಸುಗುಸು ಮಾತುಗಳು ಕೇಳಿ ಬಂದವು.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement