ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಡಿಡಿಪಿಐ, ಡಿವೈಪಿಸಿ ಹುದ್ದೆ ನೇಮಕಕ್ಕೆ ಆಗ್ರಹ

Rashmi Kasaragodu
Updated On : 25 Jul 2014, 11:27 am

ಯಾದಗಿರಿ: ಬೆಂಗಳೂರಿನ ವಿಧಾನಸೌಧದಲ್ಲಿ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಣ ಇಲಾಖೆ ಸಚಿವ ಕಿಮ್ಮನೆ ರತ್ನಾಕರ್ ಇವರಿಗೆ ಕರವೇ ಉತ್ತರ ಕರ್ನಾಟಕ ವಲಯ ಅಧ್ಯಕ್ಷ ಶರಣು ಗದ್ದುಗೆ ನಿಯೋಗದೊಂದಿಗೆ ಮನವಿ ಸಲ್ಲಿಸಿದರು. ಗುಲ್ಬರ್ಗ ಮತ್ತು ಯಾದಗಿರಿಯಲ್ಲಿನ ಶಿಕ್ಷಣ ಇಲಾಖೆಯ ಖಾಲಿ ಇರುವ ಹುದ್ದೆ ಡಿಡಿಪಿಐ ಹಾಗೂ ಡಿವೈಪಿಸಿ ಹುದ್ದೆಗಳನ್ನು ನೇಮಕ ಮಾಡಿಕೊಳ್ಳಬೇಕೆಂದು ಆಗ್ರಹಿಸಿದರು. ಟಿಇಟಿ ಪರೀಕ್ಷೆಯ ಮಾದರಿಯನ್ನು ಆಂಧ್ರ, ಮಹಾರಾಷ್ಟ್ರ, ಕೇರಳ ಇನ್ನಿತರ ರಾಜ್ಯಗಳ ಮಾದರಿಯಂತೆ ನಡೆಸಬೇಕು. ನೂರಾರು ವರ್ಷಗಳ ಇತಿಹಾಸದ ಹೈದ್ರಾಬಾದ್ ಕರ್ನಾಟಕದ ಪರಿಚಯವನ್ನು ಪಠ್ಯಕ್ರಮದಲ್ಲಿ ಬರುವಂತೆ ಮುದ್ರಣವಾಗಬೇಕೆಂದು ಆಗ್ರಹಿಸಿದರು.  ಬಾಪುಗೌಡ, ರವೀಂದ್ರ, ಶಿವಪ್ರಕಾಶ್, ಬಾಗಣ್ಣ, ನಿಂಗರಾಜು ಇನ್ನೂ ಹಲವಾರು ಸೇರಿದ್ದರು.
108 ನೌಕರರ ಆಯ್ಕೆ
ಯಾದಗಿರಿ: ಜಿಲ್ಲಾ 108 ನೌಕರರ ಸಂಘದ ನೂತನ ಪದಾಧಿಕಾರಿಗಳನ್ನು ನಗರದ ಪ್ರವಾಸಿ ಮಂದಿರದಲ್ಲಿ ಎಲ್ಲ ಸದಸ್ಯರು ಸೇರಿ ಆಯ್ಕೆ ಮಾಡಿದರು. ಗೌರವಾಧ್ಯಕ್ಷ ಸುದರ್ಶನ್, ಅಧ್ಯಕ್ಷ ಇಮಾನುವೆಲ್ ವೈ.ಎಸ್, ಉಪಾಧ್ಯಕ್ಷ ಪ್ರೇಮಕುಮಾರ್, ಪ್ರಧಾನ ಕಾರ್ಯದರ್ಶಿ ಮರೆಪ್ಪ, ಸಂಘಟನಾ ಕಾರ್ಯದರ್ಶಿ ಬಸವರಾಜ , ಜಂಟಿ ಕಾರ್ಯದರ್ಶಿ ಶಾಂತರಾಜ, ಖಜಾಂಚಿಯಾಗಿ ಅಕ್ಬರ್, ಸಂಚಾಲಕರಾಗಿ ಮಹೇಶ್ಬಾಬು ಕಲಾಲ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಸಂಘದ ಅಧ್ಯಕ್ಷರು ತಿಳಿಸಿದ್ದಾರೆ.
ಹೊಲದಲ್ಲೇ ರೈತರಿಗೆ ಪಾಠ
ಯಾದಗಿರಿ: ಕೃಷಿ ವಿಜ್ಞಾನವನ್ನು ರೈತರಿಗೆ ಹೊಲದಲ್ಲಯೇ ಅಳವಡಿಸಿ, ಮೌಲ್ಯಮಾಪನ ಮಾಡಿ, ಎಲ್ಲರಿಗೂ ಮಾಹಿತಿ ನೀಡುವುದೇ ಭೂಚೇತನ ಯೋಜನೆಯ ಉದ್ದೇಶವಾಗಿದೆ ಎಂದು ಸೈದಾಪುರ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ರಾಜಕುಮಾರ ತಿಳಿಸಿದರು.
ಸೈದಾಪುರ ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಬದ್ದೇಪಲ್ಲಿ ಗ್ರಾಮದ ಬಾಲಕೃಷ್ಣ ನಿಂಗಪ್ಪ ಅವರ ಹೊಲದಲ್ಲಿ ಭೂಚೇತನ ಯೋಜನೆ ಅಡಿಯಲ್ಲಿ ಆಯೋಜಿಸಿದ್ದ ತೊಗರಿ ಬೆಳೆ ಬಗ್ಗೆ ರೈತ ಕ್ಷೇತ್ರ ಪಾಠಶಾಲೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮುಂಗಾರು ಬೆಳೆಗಳಾದ ಹೆಸರು, ತೊಗರಿ, ಹತ್ತಿ ಮತ್ತು ಸೂರ್ಯಕಾಂತಿ ಬೆಳೆಗಳಿಗೆ ಬರುವ ರೋಗ ಮತ್ತು ಕೀಟ ಬಾಧೆ ಲಕ್ಷಣಗಳು ಮತ್ತು ಅವುಗಳ ಹತೋಟಿಗಾಗಿ ಸಮಗ್ರ ರೋಗ ಮತ್ತು ಕೀಟಗಳ ನಿರ್ವಹಣಾ ವಿಧಾನಗಳು, ಪರಿಸರ ಸ್ನೇಹಿ ಸಾವಯವ ಪದ್ಧತಿಯಲ್ಲಿ ಅವುಗಳ ನಿರ್ವಹಣೆ ಬಗ್ಗೆ ರೈತರಿಗೆ ಮಾಹಿತಿ ನೀಡಿದರು.
ಹೊಲವೇ ಕಲಿಕಾ ಕ್ಷೇತ್ರ: ಇದೊಂದು ವಿನೂತನ ಮಾದರಿಯ, ವಿಶಿಷ್ಟವಾದ ವಿಸ್ತರಣಾ ಶಿಕ್ಷಣ ಪದ್ಧತಿಯಾಗಿದೆ. ಇಲ್ಲಿ ರೈತರ ಹೊಲವೇ ಕಲಿಕಾ ಕ್ಷೇತ್ರವಾಗಿದ್ದು, ಬಿತ್ತುವುದರಿಂದ ಹಿಡಿದು, ಕಟಾವಿನವರೆಗೆ ಸ್ವತಃ ರೈತರೇ ನಿರಂತರ ಕ್ಷೇತ್ರ ವೀಕ್ಷಿಸಬಹುದಾಗಿದೆ. ಮಿತ್ರ ಕೀಟಗಳನ್ನು ಸಂರಕ್ಷಿಸಿ, ಬೆಳೆ ನಿರ್ವಹಣೆಯ ಬಗ್ಗೆ ಗುಂಪಿನಲ್ಲಿ ಚರ್ಚಿಸಬಹುದು. ಕಡಿಮೆ ಖರ್ಚಿನಲ್ಲಿ ಲಾಭದಾಯಕ ಮತ್ತು ಆರೋಗ್ಯಕರ ಬೆಳೆ ಬೆಳೆಯುವುದಾಗಿದೆ ಎಂದು ಹೇಳಿದರು. ಬೆ. 8ರಿಂದ 10 ಗಂಟೆಯ ಅವಧಿಯಲ್ಲಿ ಪಾಠ ಶಾಲೆ ನಡೆಸುತ್ತಿದ್ದು, ರೈತರು ಹೊಲ, ಗದ್ದೆಗಳಿಗೆ ಹೋಗುವ ಮುಂಚೆ ಅನೇಕ ವಿಷಯಗಳನ್ನು ತಿಳಿದುಕೊಂಡು ಹೊಲದಲ್ಲಿ ಪ್ರಯೋಗ ಮಾಡಬಹುದಾಗಿದೆ ಎಂದರು. ಗ್ರಾಪಂ ಸದಸ್ಯರಾದ ಶರಣಬಸುಸ್ವಾಮಿ, ಅಭಿಮನ್ಯು ಸಾವಕಾರ, ಸುಭಾಷ ಯಾದವ, ಮೆಹಮೂದ್, ಗ್ರಾಮದ ನೂರಾರು ರೈತರು ಭಾಗವಹಿಸಿದ್ದರು. ರೈತ ಅನುವುಗಾರ ದೇವಿಂದ್ರಪ್ಪ ಸ್ವಾಗತಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement