ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಾಜ್ಯಮಟ್ಟದ ಕಥಾ ಸ್ಪರ್ಧೆಗೆ ಆಹ್ವಾನ

Rashmi Kasaragodu
Updated On : 25 Jul 2014, 11:33 am

ಗುಲ್ಬರ್ಗ: ಗುಲ್ಬರ್ಗ ವಿವಿ ದಿ. ಜಯತೀರ್ಥ ರಾಜಪುರೋಹಿತ ಸ್ಮಾರಕ ರಾಜ್ಯಮಟ್ಟದ ಕನ್ನಡ ಕಥಾ ಸ್ಪರ್ಧೆಗೆ ಸಣ್ಣ ಕತೆಗಳನ್ನು ಆಹ್ವಾನಿಸಿದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಕತೆಗಾರರು ಕತೆಯ ನಾಲ್ಕು ಪ್ರತಿಗಳನ್ನು ಆ.20 ರೊಳಗಾಗಿ ನಿರ್ದೇಶಕರು, ಪ್ರಸಾರಾಂಗ, ಗುಲ್ಬರ್ಗ ವಿಶ್ವವಿದ್ಯಾಲಯ, ಗುಲ್ಬರ್ಗ-585106 ಈ ವಿಳಾಸಕ್ಕೆ ಕಳುಹಿಸಲು ತಿಳಿಸಲಾಗಿದೆ. ಪ್ರಥಮ ಸ್ಥಾನ ಪಡೆದ ಕತೆಗೆ 2 ಸಾವಿರ ನಗದು ಮತ್ತು ಚಿನ್ನದ ಪದಕ ಪ್ರಶಸ್ತಿ ರೂಪದಲ್ಲಿ ನೀಡಲಾಗುವುದು. ಕತೆ ಕನ್ನಡದಲ್ಲಿದ್ದು, ಸ್ವತಂತ್ರವಾಗಿರಬೇಕು. ಅನುವಾದವಾಗಿರಬಾರದು ಮತ್ತು ಈ ಮೊದಲು ಎಲ್ಲಿಯೂ ಪ್ರಕಟವಾಗಿರಬಾರದು. 45 ವರ್ಷ ವಯಸ್ಸು ಮೀರಿರಬಾರದು. ಇದಕ್ಕಾಗಿ ಜನ್ಮ ದಿನಾಂಕದ ಪ್ರಮಾಣ ಪತ್ರದ ಪ್ರತಿ ಲಗತ್ತಿಸಬೇಕು ಎಂದು ವಿವಿ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement