ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ನಾಲಾವಾರ ಗ್ರಾಪಂ ವಿಶೇಷ ಸಭೆ

Rashmi Kasaragodu
Updated On : 27 Jul 2014, 12:03 pm

ಶಹಾಬಾದ್: ಸ್ಥಳೀಯ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಉಪಾಧ್ಯಕ್ಷೆ ಶಿವಮ್ಮ ಅಧ್ಯಕ್ಷತೆಯಲ್ಲಿ ವಿಶೇಷ ಸಾಮಾನ್ಯ ಸಭೆ ನಡೆಯಿತು. 2014- 15ನೇ ಸಾಲಿನ ಇಂದಿರಾ ಆವಾಸ್ ಯೋಜನೆ ಅಡಿಯಲ್ಲಿ 43 ಮನೆ ಮಂಜೂರಾಗಿದ್ದು, ಇವುಗಳಲ್ಲಿ ಪರಿಶಿಷ್ಟ ಜಾತಿಗೆ 25, ಪ.ಪಂಗಡಕ್ಕೆ 3, ಸಾಮಾನ್ಯರಿಗೆ 4, ಅಲ್ಪಸಂಖ್ಯಾತರಿಗೆ 11 ಮನೆಗಳನ್ನು ನೀಡುವ ಕುರಿತು ನಿರ್ಣಯ ಕೈಗೊಳ್ಳಲಾಯಿತು. ಪಂಚಾಯಿತಿ ವ್ಯಾಪ್ತಿಯ ತಾಂಡಾಗಳಿಗೆ, ಕುಂಬಾಹಳ್ಳಿ ಗ್ರಾಮಕ್ಕೆ 22, ನಾಲವಾರ ಗ್ರಾಮಕ್ಕೆ 21 ಮನೆಗಳನ್ನು ನೀಡುವ ಕುರಿತು ಒಪ್ಪಿಗೆ ನೀಡಲಾಯಿತು. 2011- 12ನೇ ಸಾಲಿನ ಬಿಆರ್‌ಜಿಎಫ್ ಯೋಜನೆ ಅಡಿಯ 1.50 ಲಕ್ಷ, 2014- 15ನೇ ಸಾಲಿನ 8.32 ಲಕ್ಷ ಅನುಮೋದನೆ ನೀಡಲಾಯಿತು. 2014-15ನೇ ಸಾಲಿನ ನರೇಗಾ ಅನುದಾನದ 30 ಲಕ್ಷ ಅನುದಾನವನ್ನು ಅಭಿವೃದ್ಧಿ ಕಾರ್ಯಗಳಿಗೆ ಸರ್ವ ಸದಸ್ಯರ ಅನುಮೋದನೆ ಪಡೆಯಲಾಯಿತು. ಜು.30 ರಂದು ಬೆ.10ಕ್ಕೆ ಗ್ರಾಪಂ ಆವರಣದಲ್ಲಿ ಮತ್ತು ಮ.1ಕ್ಕೆ ರೈಲು ನಿಲ್ದಾಣದ  ಪ್ರವಾಸಿ ಮಂದಿರದಲ್ಲಿ ಗ್ರಾಮ ಸಭೆಗಳು ನಡೆಯಲಿವೆ ಎಂದು ಪಿಡಿಒ ಕಾವೇರಿ ರಾಠೋಡ್ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement