ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರಂಜಾನ್ ಸೌಹಾರ್ದದಿಂದ ಆಚರಿಸಿ: ಡಿವೈಎಸ್‌ಪಿ

Rashmi Kasaragodu
Updated On : 27 Jul 2014, 12:04 pm

ಶಹಾಬಾದ್: ನಗರ ಪೊಲೀಸ್ ಠಾಣೆಯಲ್ಲಿ ರಂಜಾನ್ ನಿಮಿತ್ತ ಮಂಗಳವಾರ ಬೆಳಗ್ಗೆ ಎಲ್ಲ ಧರ್ಮಗಳ, ನಾನಾ ರಾಜಕೀಯ ಪಕ್ಷಗಳೊಂದಿಗೆ ಶಾಂತಿ ಸಭೆ ನಡೆಸಲಾಯಿತು. ಡಿವೈಎಸ್ಪಿ ಮಹೇಶ ಮೇಘಣ್ಣವರ ಮಾತನಾಡಿ, ರಂಜಾನ್ ಹಬ್ಬವನ್ನು ಸಾರ್ವಜನಿಕರು ಶಾಂತಿ ಸೌಹಾರ್ದದೊಂದಿಗೆ ಆಚರಿಸಬೇಕು. ಒಂದು ವೇಳೆ ಸಣ್ಣಪುಟ್ಟ ಘಟನೆಗಳು ಸಮಾಜದ ಹಿರಿಯರು ಸ್ಥಳದಲ್ಲೇ ತಕ್ಷಣ ಇತ್ಯರ್ಥ ಪಡಿಸಬೇಕು. ಸಮಾಜದ ಸ್ವಾಸ್ಥ್ಯ ಕೆಡಿಸುವವರ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಬೇಕೆಂದು ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ಎಂ.ಎ. ರಶೀದ್, ಬಿಜೆಪಿ ಮುಖಂಡ ಶರಣಪ್ಪ ಹದನೂರ, ಲಕ್ಷ್ಮೀಕಾಂತ ಕಂದಗೋಳ, ಹಂಪಣ್ಣ ಪೋತನಕರ್, ಸಂತೋಷಕುಮಾರ ಇಂಗಿನಶೆಟ್ಟಿ ಅವರಿ ಮಾತನಾಡಿ, ನಗರದಲ್ಲಿ ಶಾಂತಿ, ಸೌಹಾರ್ದ ರೀತಿಯಿಂದ ರಂಜಾನ್, ಶ್ರಾವಣ ಮಾಸ ಆಚರಿಸಲಾಗುವುದೆಂದು ಪೊಲೀಸರಿಗೆ ಭರವಸೆ ನೀಡಿದರು. ಇದೇ ವೇಳೆ ನೂತನವಾಗಿ ಕರ್ತವ್ಯಕ್ಕೆ ಹಾಜರಾದ ಪಿಎಸ್‌ಐ ಕಪಿಲದೇವ ಅವರನ್ನು ಇಲಾಖೆ ಹಾಗೂ ಸಾರ್ವಜನಿಕರ ವತಿಯಿಂದ ಸ್ವಾಗತಿಸಲಾಯಿತು. ಶರಣಬಸಪ್ಪ ಬಿರಾಳಿ, ಶಿವರಾಜ ಕೋರೆ, ಯಾಕೂಬ್ ಮಚೆಂಟ್ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement