ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೇವೆಯಿಂದಲೇ ಸಾರ್ಥಕತೆ: ರವಿ ದೇಶಪಾಂಡೆ

Rashmi Kasaragodu
Updated On : 27 Jul 2014, 12:02 pm

ಗುಲ್ಬರ್ಗ: ಸೇವೆಯಿಂದಲೇ ಬದುಕಿನಲ್ಲಿ ಸಾರ್ಥಕತೆ ಪಡೆಯಲು ಸಾಧ್ಯ ಎಂದು ರವಿ ದೇಶಪಾಂಡೆ ಅಭಿಪ್ರಾಯಪಟ್ಟರು. ಅವರು ರೋಟರಿ ಕ್ಲಬ್(ಉತ್ತರ) ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು. ಸಾಮಾನ್ಯರು, ನಿರ್ಗತಿಕರು, ಆರ್ಥಿಕವಾಗಿ ಬಳಲುವವರಿಗೆಲ್ಲರಿಗೂ ಸಹಾಯ ಹಸ್ತ ಚಾಚಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಕಷ್ಟದಲ್ಲಿರುವವರೂ ಬದುಕಲು ಸಾಧ್ಯ ಎಂದರು. ಪೋಲಿಯೋ, ಏಡ್ಸ್‌ನಂತಹ ರೋಗಗಳಿಂದಲೂ ಅನೇಕರು ಪೀಡಿತರಾಗುತ್ತಿದ್ದಾರೆ. ಇವುಗಳ ನಿರ್ಮೂಲನೆಗೆ ಯೋಜನೆಗಳನ್ನು ಹಮ್ಮಿಕೊಂಡು ಅರ್ಥಪೂರ್ಣವಾಗಿ ಅನುಷ್ಠಾನಕ್ಕೆ ತರುವಲ್ಲಿ ಎಲ್ಲರೂ ಶ್ರಮಿಸಬೇಕು ಎಂದರು. ಜಯಕುಮಾರ ಮಾಡಗಿ, ಡಾ. ಗೌತಮ ಜಾಗೀರ್‌ದಾರ್, ಡಾ. ಸಿದ್ದೇಶ, ಬಸವರಾಜ ಖಂಡೇರಾವ್, ರಜನಿ ಪತಂಗೆ, ಪಾರ್ವತಿ ನಿಗ್ಗುಡಗಿ, ರೇಖಾ, ಲುಂಬಿನಿ, ಮಣಿಲಾಲ ಶಹಾ ಇದ್ದರು.


ಅಂಚೆ ಚೀಟಿ ಹೊಂದುವ ಸೌಲಭ್ಯ ಗುಲ್ಬರ್ಗದಲ್ಲೂ ಲಭ್ಯ


ಗುಲ್ಬರ್ಗ: ನಿಮ್ಮದೇ ಆದಂತಹ ಅಂಚೆ ಚೀಟಿ ಹೊಂದುವ ಸೌಕರ್ಯ ಇದೀಗ ಗುಲ್ಬರ್ಗ ಮುಖ್ಯ ಅಂಚೆ ಕಚೇರಿಯ್ಲಲೂ ಲಭ್ಯವಾಗಿದೆ. ಮದುವೆ, ಮುಂಜಿವೆಗಳ ಸಂದರ್ಭಗಳಲ್ಲಿ ನಿಮಗೆ ಬೇಕಾದಂತಹ ಫೋಟೋಗಳಿರುವ ಲಕೋಟೆಗಳನ್ನು ಈ ಸೌಲಭ್ಯದಡಿಯಲ್ಲಿ ಹೊಂದಬಹುದಾಗಿದೆ. ಲಕೋಟೆ ಮೇಲೆ ಕಂಪ್ಯೂಟರೀಕೃತ ವಿಳಾಸ ಬರೆಯುವ ಸೌಕರ್ಯವೂ ಇರುತ್ತದೆ. ಅಂಚೆ ಬಟವಾಡೆ ಸಂದರ್ಭದಲ್ಲಿ ನಿಮ್ಮ ಮೆಚ್ಚುಗೆಯ ಫೋಟೋಗಳಿರುವ ಅಂಚೆ ಚೀಟಿ ಮೇಲೆ ಮುದ್ರೆ ಒತ್ತಲಾಗದು. ಆ ಬಗ್ಗೆ ತುಂಬ ಕಾಳಜಿ ವಹಿಸಲು ಅಂಚೆ ಇಲಾಖೆ ನಿರ್ಧರಿಸಿದೆ. ಕಳೆದ ನಾಲ್ಕು ದಿನಗಳಿಂದ ಈ ಸೌಕರ್ಯ ಗುಲ್ಬರ್ಗದಲ್ಲಿ ಆರಂಭವಾಗಿದೆ. ವಿವರಕ್ಕೆ ದೂ. 08472- 263803, 263802 ಅಥವಾ 263800ಗೆ ಕರೆ ಮಾಡಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement