ಠಾಕ್ರೆ ಪ್ರತಿಕೃತಿ ದಹನ, ಪ್ರತಿಭಟನೆ
ಯಾದಗಿರಿ: ಎಂಇಎಸ್ ಮತ್ತು ಶಿವಸೇನೆ ಕಾರ್ಯಕರ್ತರು ಕರ್ನಾಟಕ ಬಸ್ಸುಗಳ ಕಲ್ಲು ತೂರಾಟ ಮಾಡಿರುವುದನ್ನು ಖಂಡಿಸಿ ಜಿಲ್ಲಾ ಕರ್ನಾಟಕ ರಕ್ಷಣಾ ವೇದಿಕೆನಗರದ ಲಾಲ್ ಬಹದ್ದೂರ್ ಶಾಸ್ತ್ರಿ ವೃತ್ತದಲ್ಲಿ ಶಿವಸೇನೆ ಮುಖ್ಯಸ್ಥ ಉದ್ಭವ ಠಾಕ್ರೆ ಪ್ರತಿಕೃತಿ ದಹನ ಮಾಡಿ ಪ್ರತಿಭಟನೆ ನಡೆಸಿದರು.
ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ಮಲ್ಲು ಮ್ಯಾಳಿಕೇರಿ, ಅರ್ಜುನ ಪವಾರ, ಭೀಮಾಶಂಕರ ಹತ್ತಿಕುಣಿ, ಶರಣಪ್ಪ ಜಾಕನಹಳ್ಳಿ, ಹಣಮಂತ ನಾಯಕ ಖಾನಳ್ಳಿ, ರಾಜು ಚವ್ಹಾಣ, ದೇವು ಪೂಜಾರಿ, ನಾಗಪ್ಪ ದೇಸಾಯಿ, ವೆಂಕಟೇಶ ದಾಸ್, ದಶರಥ ರಾಠೋಡ, ಸಿದ್ದಪ್ಪ ನಾಯಕ, ಭೀಮು ಠಾಣಗುಂದಿ, ಮಲ್ಲು ರಾಮಸಮುದ್ರ, ರಾಜು ಪಗಲಾಪುರ, ಭೀಮು ಮಲ್ಹಾರ, ಸಿದ್ದು ಸಾಹುಕಾರ ಠಾಣಗುಂದಿ, ರಡ್ಡಿ ಅಲ್ಲಿಪುರ, ಗೋವಿಂದಪ್ಪ ವರ್ಕನಳ್ಳಿ, ಹುಲೇಪ್ಪ ಪಗ್ಲಾಪುರ, ಮಾಳಪ್ಪ ಅಲ್ಲಿಪುರ, ಸಾಬಣ್ಣ ಅಲ್ಲಿಪುರ, ಬಸವರಾಜ ನಾಯಕ ಹಾಗೂ ಕರವೇ ಕಾರ್ಯಕರ್ತರು ಇದ್ದರು.