ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅರ್ಹರಿಗೆ ಮನೆ ಹಂಚಿಕೆ ಮಾಡಿ: ಪಾಟೀಲ್

Rashmi Kasaragodu
Updated On : 29 Jul 2014, 10:34 am

ಹುಣಸಗಿ: ಮನೆಗಳ ಹಂಚಿಕೆಯಲ್ಲಿ ತಾರತಮ್ಯ ಮಾಡದೇ ಅರ್ಹರಿಗೆ ಮನೆ ನೀಡಿ ಜಿಪಂ ಸದಸ್ಯ ಎಚ್.ಸಿ. ಪಾಟೀಲ್ ಹೇಳಿದರು.
ಸಮೀಪದ ರಾಜನಕೋಳೂರು ಗ್ರಾಮದ ಗ್ರಾ.ಪಂ. ಆವರಣದಲ್ಲಿ ಜರುಗಿದ ಗ್ರಾಮ ಸಭೆಯಲ್ಲಿ ಮಾತನಾಡಿದ ಅವರು, ಯಾರಿಗೆ ಮನೆ ಇಲ್ಲವೋ ಅಂತವರನ್ನು ಗುರುತಿಸಿ ಅವರಿಗೆ ಮನೆಗಳನ್ನು ನೀಡಿ. ಮನೆಗಳ ಆಯ್ಕೆ ಪ್ರಕ್ರಿಯೆ ನಿಷ್ಪಕ್ಷಪಾತವಾಗಿ ನಡೆಸಿ ಇದರಿಂದ ಯೋಜನೆ ಯಶಸ್ವಿಯಾಗುತ್ತದೆ. ಮನೆಗಳ ಹಂಚಿಕೆ ಪ್ರಕ್ರಿಯೆಯಲ್ಲಿ ಗ್ರಾಮಸ್ಥರು ಸಹಕರಿಸುವುದು ಅವಶ್ಯ ಎಂದು ಹೇಳಿದರು.
ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಶರಣಗೌಡ ಉಳ್ಳೇಸೂರು, ರಾಜನಕೋಳೂರು ಗ್ರಾಪಂಗೆ ಒಟ್ಟು 36 ಇಂದಿರಾ ಆವಾಸ್ ಮನೆಗಳು ಮಂಜೂರಾಗಿದ್ದು ಅದರಲ್ಲಿ ರಾಜನಕೋಳೂರು ಗ್ರಾಮಕ್ಕೆ 20 ಮನೆಗಳು ಮಂಜೂರಾಗಿವೆ. ಎಸ್ಸಿ- 10, ಎಸ್ಟಿ-7, ಅಲ್ಪಸಂಖ್ಯಾತರು- 2 ಇತರರಿಗಾಗಿ- 1 ಮನೆಗಳು ಮಂಜೂರಾಗಿವೆ. ಯಾರಿಗೆ ಸೂರು ಇಲ್ಲವೋ ಅಂಥವರಿಗೆ ಮನೆಗಳು ಹಂಚಿಕೆಯಾದರೆ ಯೋಜನೆಗೊಂದು ನಿಜವಾದ ಅರ್ಥ ಸಿಗುತ್ತದೆ ಎಂದರು.
ಸಭೆಯಲ್ಲಿ ಗ್ರಾಮದಲ್ಲಿ ಕುಡಿಯುವ ನೀರು ಬಗ್ಗೆ ಚರ್ಚಿಸಲಾಯಿತು. ಈ ಕುರಿತು ಉತ್ತರ ನೀಡಿದ ಪಿಡಿಒ, ಈಗಾಗಲೇ ಸಮರ್ಪಕವಾದ ನೀರು ಸರಬರಾಜಿಗಾಗಿ ಕೆಲಸ ನಡೆಯುತ್ತಿದೆ. ಆದಷ್ಟು ಶೀಘ್ರದಲ್ಲಿ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಸಮರ್ಪಕವಾಗಿ ನಡೆಯುತ್ತದೆ ಎಂದು ಉತ್ತರಿಸಿದರು.
ಸಭೆಯಲ್ಲಿ ಗ್ರಾಪಂ ಅಧ್ಯಕ್ಷ ಸಂಗನಗೌಡ ಪೊಲೀಸ್ ಪಾಟೀಲ್, ರಾಚಯ್ಯಸ್ವಾಮಿ, ಭೀಮನಗೌಡ ಮಾಗನೂರು, ಸಿದ್ಲಿಂಗ ರಡ್ಡಿ, ಬಾಬುಗೌಡ ವಠಾರ, ತಿರುಪತಿಗೌಡ ದದ್ದಲ್, ತಿರುಪತಿ ಸಾಹುಕಾರ, ಸಿಆರ್ಪಿ ವೀರನಗೌಡ ಪಾಟೀಲ ಸೇರಿದಂತೆ ಗ್ರಾಮಸ್ಥರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement