ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕೃತಿ ಬಿಡುಗಡೆ, ಮುಂಗಾರು ಕವಿಗೋಷ್ಠಿ ಇಂದು

Rashmi Kasaragodu
Updated On : 29 Jul 2014, 10:33 am

ಶಹಾಪುರ: ಸಗರನಾಡು ಸೇವಾ ಪ್ರತಿಷ್ಠಾನ ಸುರಪುರ ಹಾಗೂ ವಿದ್ಯಾಜ್ಯೋತಿ ಪ್ರಕಾಶನ ಶಹಾಪುರ ಸಹಯೋಗದಲ್ಲಿ ಸಾಹಿತಿ ಅಶೋಕ ಚೌಧರಿ ರಚಿತ ನಾದ ನಿನಾದ ಕವನ ಸಂಕಲನ ಬಿಡುಗಡೆ ಸಮಾರಂಭ ಹಾಗೂ ಜಿಲ್ಲಾ ಮಟ್ಟದ ಮುಂಗಾರು ಕವಿಗೋಷ್ಠಿ ಜು.29ರ ಬೆಳಗ್ಗೆ 10 ಗಂಟೆಗೆ ಪಟ್ಟಣದ ಜಿವ್ಹೇಶ್ವರ ಕಲ್ಯಾಣ ಮಂಟಪದಲ್ಲಿ ಏರ್ಪಡಿಸಲಾಗಿದೆ ಎಂದು ಜಂಟಿ ಸಮಿತಿಗಳ ವತಿಯಿಂದ ಪ್ರಕಾಶ ಅಂಗಡಿ ಕನ್ನಳ್ಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಶಹಾಪುರ ಫಕೀರೇಶ್ವರ ಮಠದ ಗುರುಪಾದ ಸ್ವಾಮೀಜಿ ಹಾಗೂ ಗುರುಮಠಕಲ್ ಖಾಸಾಮಠದ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ಕಾರ್ಯಕ್ರಮವನ್ನು ಮಾಜಿ ಸಚಿವರಾದ ವೈಜನಾಥ ಪಾಟೀಲ ಉದ್ಘಾಟಿಸುವರು. ನಿವೃತ್ತ ಪೊಲೀಸ್ ಅಧಿಕಾರಿ ಸಿ.ಎನ್. ಭಂಡಾರೆ ಅಧ್ಯಕ್ಷತೆ ವಹಿಸಲಿದ್ದು, ಗುಲ್ಬರ್ಗದ ಕನ್ನಡನಾಡು ಓದುಗರ ವೇದಿಕೆ ಅಧ್ಯಕ್ಷ ಅಪ್ಪಾರಾವ್ ಅಕ್ಕೋಣೆ ಕವನ ಸಂಕಲನ ಬಿಡುಗಡೆಗೊಳಿಸುವರು. ಸಾಹಿತಿ ಶರಣಗೌಡ ಪಾಟೀಲ ಕೃತಿ ಪರಿಚಯಸಲಿದ್ದು, ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಅಧ್ಯಕ್ಷ ಸಿದ್ದಪ್ಪ ಹೊಟ್ಟಿ, ಪ್ರಮುಖರಾದ ಶಾಂತಪ್ಪ ಬೂದಿಹಾಳ, ಸಿದ್ದಲಿಂಗಣ್ಣ ಆನೆಗುಂದಿ, ಚಂದ್ರಕಾಂತ ಕರದಳ್ಳಿ, ಸದಾನಂದ ಪಾಣಿಭಾತೆ, ಪಾ.ವಿ.ಅರಕೇರಿ, ಸೇರಿದಂತೆ ಇತರರು ಅತಿಥಿಗಳಾಗಿ ಭಾಗವಹಿಸುವರು. ಕವಿಗೋಷ್ಠಿಯನ್ನು ಸಾಹಿತಿ ಸೂಗಯ್ಯ ಹಿರೇಮಠ ಉದ್ಘಾಟಿಸುವರು. ಕಥೆಗಾರ ಸಿದ್ದರಾಮ ಹೊನ್ಕಲ್ ಕವಿಗೋಷ್ಠಿ ಅಧ್ಯಕ್ಷತೆ ವಹಿಸುವರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement