ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಡಿಜಿಪಿ ರವೀಂದ್ರನಾಥ್ಗೆ ಅಗೌರವ; ಅಧಿಕಾರಿಗಳ ಮೇಲೆ ಕ್ರಮಕ್ಕೆ ಆಗ್ರಹ

Mainashree
Updated On : 2 Jun 2014, 11:48 am

ಯಾದಗಿರಿ: ಕೆಎಸ್ಆರ್ಪಿ ಎಡಿಜಿಪಿ ಡಾ. ಎಸ್.ರವಿಂದ್ರನಾಥ ಅವರಿಗೆ ಅಗೌರವ ತೋರಿದ ಪೊಲೀಸ್ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದ್ದಾರೆ. ಡಾ. ರವಿಂದ್ರನಾಥ ಅವರು ಕಾಫಿ ಶಾಫ್ನಲ್ಲಿ ಮಹಿಳೆ ಫೋಟೊ ತೆಗೆದಿದ್ದಾರೆಂದು ಸುಳ್ಳು ಆರೋಪ ಹೊರಿಸಿ ಪ್ರಕರಣ ದಾಖಾಲಿಸಿಕೊಂಡುರುವುದು ಖಂಡನೀಯ. ದಕ್ಷ ಅಧಿಕಾರಿಯ ಮೇಲೆ ಅನುಚಿತವಾಗಿ ವರ್ತಿಸಿ ಪಿಎಸ್ಐ ರವಿ ಎಂ.ಎಸ್ ಮತ್ತು ನಗರ ಪೊಲೀಸ್ ಕಮೀಷನರ್ ರಾಘವೇಂದ್ರ ಔರದಕರ್, ರವಿಕಾಂತೇಗೌಡ ಅವರ ಮೇಲೆ ಕಾನೂನು ಸೂಕ್ತ ಕ್ರಮ ಜರುಗಿಸಬೇಕೆಂದು ಅವರು ಆಗ್ರಹಿಸಿದ್ದಾರೆ.
ವಿಚಾರಣೆ ನಡೆಸಿ: ದೂರು ಸಲ್ಲಿಸಿದ ಮಹಿಳೆಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು. ಕಾಫಿ ಶಾಪ್ನಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದು ಜನತೆಗೆ ನಿಜವಾದ ವಿಷಯವನ್ನು ಮಾಧ್ಯಮದ ಮೂಲಕ ಬಹಿರಂಗಪಡಿಸಬೇಕು. ಒಬ್ಬ ಉನ್ನತ ಅಧಿಕಾರಿಯ ಮೇಲೆ ಅನುಚಿತವಾಗಿ ವರ್ತಿಸಿದ ಪಿಎಸ್ಐ ರವಿ ಅವರನ್ನು ಕೂಡಲೇ ಅಮಾನತು ಮಾಡಿ, ವಿಚಾರಣೆಗೆ ಒಳಪಡಿಸಬೇಕೆಂದು ಅವರು ಒತ್ತಾಯಿಸಿದ್ದಾರೆ. ಪ್ರಕರಣವನ್ನು ನ್ಯಾಯ ಮತ್ತು ಮುಕ್ತವಾಗಿ ತನಿಖೆ ಮಾಡಲೂ ಸಿಐಡಿ ಬದಲಾಗಿ ಸಿಬಿಐ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು. ಒಂದು ವೇಳೆ ಸರ್ಕಾರ ಈ ಪ್ರಕರಣ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ರಾಜ್ಯಾದಂತ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ. ನಿಂಗಪ್ಪ ಹತ್ತಿಮನಿ, ಶ್ಯಾಂಸನ್ ಮಾಳಿಕೇರಿ, ಚನ್ನಯ್ಯ ಮಾಳಿಕೇರಿ, ನಿಂಗಪ್ಪ ವಡ್ಡನಳ್ಳಿ, ಶಾಂತಪ್ಪ ಖಾನಳ್ಳಿ, ನಿಂಗಪ್ಪ ದಳವಾದಿ, ನಾಗರಾಜ ಬೀರನೂರ್, ಆಂಜನೇಯ, ತಾಯಪ್ಪ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement