ಯುವತಿ ಮೇಲೆ ಅತ್ಯಾಚಾರ: ಆರೋಪಿ ಬಂಧನಕ್ಕೆ ಆಗ್ರಹ
ಚಿತ್ತಾಪುರ: ಶಹಾಪುರ ತಾಲೂಕಿನ ಹಾಲಗೇರಿ ಗ್ರಾಮದಲ್ಲಿ ಮೇ 25ರಂದು ಅಲೆಮಾರಿ ಜನಾಂಗದ ಯುವತಿ ಮೇಲೆ ನಡೆಸಿದ ಅತ್ಯಾಚಾರ ಆರೋಪಿಗಳನ್ನು ಬಂಧಿಸಬೇಕು. ಹಲ್ಲೆಗೊಳಗಾದ ಯುವತಿಗೆ 2 ಲಕ್ಷ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಬುಡ್ಗ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕು ಅಧ್ಯಕ್ಷ ಮಾರುತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯನ್ನು ಅಂಬೇಡ್ಕರ್ ಚೌಕ್ನಿಂದ ಆರಂಭಿಸಿ ಬಸ್ ನಿಲ್ದಾಣ, ಬಸವೇಶ್ವರ ಚೌಕ್ ಮೂಲಕ ತಹಸೀಲ್ದಾರ್ ಕಚೇರಿಗೆ ತೆರಳಿ ಮುಖ್ಯಮಂತ್ರಿಗೆ ಬರೆದ ಮನವಿ ಪತ್ರವನ್ನು ತಹಸೀಲ್ದಾರ್ಗೆ ಸಲ್ಲಿಸಲಾಯಿತು. ಪ್ರತಿಭಟನೆಯಲ್ಲಿ ಸಂಘದ ಉಪಾಧ್ಯಕ್ಷ ದೇವೀಂದ್ರಪ್ಪ ಅಣಿಕೇರಿ, ಕಾರ್ಯದರ್ಶಿ ಪಂಡಿತ್, ಶಂಕರ ಅಳ್ಳೋಳ್ಳಿ, ತಿಪ್ಪಣ್ಣ ವಾಡಿ, ಶಿವರಾಜ ಶಂಕರ ಚಿತ್ತಾಪುರ, ನೀಲಕಂಠ ರಾಮತೀರ್ಥ, ದಲಿತ ಮುಖಂಡ ಶಿವಮೂರ್ತಿ ಶಾಸ್ತ್ರೀ, ಶಿವಯೋಗಿ ರಾವೂರ, ಶರಣಪ್ಪ ನಾಟಿಕಾರ, ಪರಶುರಾಮ ಕಂದಗಲ್, ರಾಮು ಹರವಾಳ, ಬಾಬು ಗೋವಿಂದ, ನರಸಿಂಗ್, ನಿಂಗಮ್ಮ, ಮಹಾದೇವಮ್ಮ, ಬಸಮ್ಮ, ವಿಜಯಲಕ್ಷ್ಮಿ, ಶಿವಮ್ಮ, ಮಲ್ಲಿಕಾರ್ಜುನ ಮಲ್ಕನ, ಕಾಶಿನಾಥ ಸೇರಿದಂತೆ ಅನೇಕರು ಭಾಗವಹಿಸಿದ್ದರು.