ನಾನಾ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರೈತ ಸಂಘ ಪ್ರತಿಭಟನೆ
ಯಾದಗಿರಿ: ಚಿಲ್ಲರೆ ವ್ಯಾಪಾರದಲ್ಲಿ ಬಹುರಾಷ್ಟ್ರೀಯ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಲು ಹೊರಟಿರುವ ಸರ್ಕಾರ ವಿರುದ್ಧ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕರ್ನಾಟಕ ಪ್ರಾಂತ ರೈತಸಂಘ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಸತ್ಯಾಗ್ರಹ ನಡೆಸಿತು. ರಾಜ್ಯ ಸರ್ಕಾರವು ಯಾವುದೇ ರೀತಿಯಲ್ಲಿ ಇದಕ್ಕೆ ಅವಕಾಶ ನೀಡದಂತೆ ಮತ್ತು ರೈತರು ಮತ್ತು ಕೂಲಿಕಾರರ ಹಿತವನ್ನು ಸಂರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ. ಎಲ್ಲ ಬಡವರಿಗೆ ನಿವೇಶನ ಹಾಗೂ ಕನಿಷ್ಠ ಬದುಕನ್ನು ರೂಪಿಸಿಕೊಳ್ಳಲು ಆನುವಾಗುವಂತೆ ಇಎಂಎಸ್ ಮಾಂದರಿಯಂತೆ ಕನಿಷ್ಠ 12 ಸೆಂಟ್ ಅಥವಾ 05 ಗುಂಟೆ ಜಮೀನು ಒದಗಿಸಲು ಮನೆ ಕಟ್ಟಿಕೊಳ್ಳಲು ಕನಿಷ್ಟ್ಠ75 ಸಾವಿರ ಸಹಾಯಧನ ಹಾಗೂ ಬಡ್ಡಿರಹಿತವಾಗಿ 3 ಲಕ್ಷ ಸಾಲ ಒದಗಿಸಬೇಕು. ಸರ್ಕಾರಿ ಜಮೀನಿನಲ್ಲಿ ಸಾಗುವಳಿ ನಿರತ ಬಡರೈತರಿಗೆ ಹಕ್ಕು ಪತ್ರ ನೀಡುವಂತೆ ತಕ್ಷಣದಿಂದಲೇ ಆದೇಶ ಹೊರಡಿಸಬೇಕು. ಇಂತಹ ಬಡ ಸಾಗುವಳಿದಾರರನ್ನು ಬೆದರಿಸುವ ಮತ್ತು ಒಕ್ಕಲೆಬ್ಬಿಸುವ ತಹಸೀಲ್ದಾರರ ನೊಟೀಸುಗಳನ್ನು ಕೂಡಲೇ ಹಿಂಪಡೆಯಬೇಕು ಎಂದು ಆಗ್ರಹಿಸಿದ್ದಾರೆ.ಜಾನುವಾರುಗಳಿಗಾಗಿ ಮೀಸಲಿಟ್ಟ ಜಮೀನು ಗೊಮಾಳವಿಲ್ಲದೆ ಅಭಿವೃದ್ಧಿಯಾಗಿರುವ ಕಾರಣ ಅಂತಹ ಭೂಮಿಯ ಬಡ ಸಾಗುದಾರರಿಗೆ ಹಕ್ಕು ಪತ್ರ ಸಿಗುವಂತೆ ಭೂ ಕಂದಾಯ ಕಾಯ್ದೆಗೆ ಸೂಕ್ತ ತಿದ್ದುಪಡಿ ಮಾಡಬೇಕು. ಅರಣ್ಯ ಭೂಮಿಯಲ್ಲಿ ನಿರತರನ್ನು ಒಕ್ಕೆಲೆಬ್ಬಿಸುವುದನ್ನು ಮತ್ತು ರೈತರ ಮೇಲೆ ಕೇಸುಗಳನ್ನು ದಾಖಲಿಸಿ ಜೈಲಿಗೆ ಕಳುಹಿಸಿ ಹಿಂಸಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.