ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

20ರೊಳಗೆ ರೈತರ ಬಾಕಿ ಹಣ ಪಾವತಿ: ಎನ್ನೆಸ್ಸೆಲ್ ಶುಗರ್ಸ್

Mainashree
Updated On : 4 Jun 2014, 10:55 am

ಗುಲ್ಬರ್ಗ: ಕಬ್ಬು ರೈತರು ತಮ್ಮ ಹೋರಾಟ ನಿಲ್ಲಿಸುವಂತೆ ಮನವಿ ಮಾಡಿರುವ ಆಳಂದ ತಲೂಕಿನ ಭೂಸನೂರಲ್ಲಿರುವ ಎನ್‌ಎಸ್‌ಎಲ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ರೈತರ ಹೋರಾಟದ ಹಿನ್ನೆಲೆಯಲ್ಲಿ ಜೂ. 3 ರಂದು ರೈತರಿಗೆ ಮನವಿ ಮಾಡುವ ರೂಪದಲ್ಲಿ ನೋಟಿಸ್ ಹೊರಡಿಸಿದ್ದು ಅದರ ಪ್ರತಿಯನ್ನು.ಕಾರ್ಖಾನೆ ದ್ವಾರಕ್ಕೆ ಅಂಟಿಸಿದೆ.
ಮೇ 27ರಿಂದ ಕಾರ್ಖಾನೆಗೆ ಬೀಗ ಹಾಕಲಾಗಿದ್ದರಿಂದ ಒಳಗಿರುವ ಸಕ್ಕರೆ ಹಾಗೂ ಮೋಲ್ಯಾಸಿಸ್ ದಾಸ್ತಾನು ಮಾರಾಟ ಮಾಡಲಾಗುತ್ತಿಲ್ಲ. ಇದರಿಂದಾಗಿ 10ರಿಂದ 12 ಕೋಟಿ ನಷ್ಟು ವಹಿವಾಟು ಸ್ಥಗಿತಗೊಂಡಿದೆ. ಇದೂ ಸಹ ರೈತರ ಬಾಕಿ ಹಣ ಪಾವತಿಯ ಮೇಲೆ ತನ್ನದೇ ಆದಂತಹ ಪರಿಣಾಮ ಬೀರುತ್ತಿದೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ.
ಈಗಾಗಲೇ ಆಡಳಿತ ಮಂಡಳಿ 5 ಕೋಟಿ ಹಣ ಬಿಡುಗಡೆ ಮಾಡಿದೆ. ಸಕ್ಕರೆ ಹಾಗೂ ಮೋಲ್ಯಾಸಿಸ್ ಮಾರಿದಾಗ ಬರಲಿದ್ದ 10 ಕೋಟಿಯಷ್ಟು ಹಣವೂ ಸೇರಿದ್ದರೆ ಅರ್ಧಕ್ಕೂ ಹೆಚ್ಚು ಬಾಕಿ ಹಣ ರೈತರಿಗೆ ಪಾವತಿಯಾಗುತ್ತಿತ್ತು. ಆದರೆ ಬೀಗ ಜಡಿದ ಹೋರಾಟ ಇದಕ್ಕೆ ಅಡಚಣೆ ಉಂಟು ಮಾಡಿದೆ. ಆದ್ದರಿಂದ ರೈತರು ಹೋರಾಟ ನಿಲ್ಲಿಸಿ ಸಹಕರಿಸಬೇಕು. ಕಾರ್ಖಾನೆ ಹಣ ಪಾವತಿಗೆ ಬದ್ಧ. ಜೂ.20ರೊಳಗೇ ಎಲ್ಲ ಬಾಕಿ ಹಣ ಪಾವತಿಸುತ್ತದೆ ಎಂದೂ ಕಾರ್ಖಾನೆ ಆಡಳಿತ ಮಂಡಳಿ ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement