ಧರ್ಮದ ತಳಹದಿ ಮೇಲೆ ಸಮಾಜ ನಿರ್ಮಾಣ ಅಗತ್ಯ
ಕ.ಪ್ರ. ವಾರ್ತೆ ್ಣ ಜೇವರ್ಗಿ ್ಣ ಜೂ.3
ಧರ್ಮದ ತಳಹದಿ ಮೇಲೆ ಸಮಾಜ ನಿರ್ಮಿಸುವುದು ಅಗತ್ಯ. ಈ ನಿಟ್ಟಿನಲ್ಲಿ ಸಮಾಜದಲ್ಲಿನ ಮಠ, ಮಂದಿರಗಳಲ್ಲಿ ಆಯೋಜಿಸುವ ಪುರಾಣ, ಪ್ರವಚನ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದರ ಮೂಲಕ ಧಾರ್ಮಿಕ ಸಂಸ್ಕಾರ ಪಡೆದುಕೊಳ್ಳಬೇಕೆಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ್ ನರಿಬೋಳ ಹೇಳಿದರು.
ತಾಲೂಕಿನ ವರವಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಬಸವೇಶ್ವರ ದೇವಸ್ಥಾನದ ಉದ್ಘಾಟನೆ ಅಂಗವಾಗಿ ಸೋಮವಾರ ಕಡಕೋಳ ಮಡಿವಾಳೇಶ್ವರರ ಪುರಾಣ ಮಂಗಲ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡುತ್ತಿದ್ದರು.
ಸಮಾಜ ಕಾರ್ಯ: ಸಗರನಾಡು ಶರಣರಬೀಡು ಎಂಬಂತೆ ಜೇವರ್ಗಿ ತಾಲೂಕಿನಲ್ಲಿ ಅನೇಕ ಶರಣರು, ಸಂತರು, ವಚನಕಾರರು, ತತ್ವಪದಕಾರರು, ದಾರ್ಶನಿಕರನ್ನು ನಾಡಿಗೆ ನೀಡಿದ ಪುಣ್ಯ ಭೂಮಿ. ಭೀಮೆ- ಕೃಷ್ಣೆಯರ ಮಧ್ಯೆಯಿರುವ ಈ ಪುಣ್ಯಭೂಮಿ ಧಾರ್ಮಿಕ ಕ್ಷೇತ್ರಕ್ಕೆ ಅದ್ವಿತೀಯ ಕೊಡುಗೆ ನೀಡಿದೆ. ಸಮಾಜಮುಖಿ ಕಾರ್ಯಗಳಿಗೆ ಸಹಾಯ, ಸಹಕಾರ ನೀಡುವುದಾಗಿ ನರಿಬೋಳ ತಿಳಿಸಿದರು.
ಪುರಾಣ: ಸಾನ್ನಿಧ್ಯ ವಹಿಸಿದ್ದ ಸೊನ್ನ ವಿರಕ್ತಮಠದ ಪೀಠಾಧಿಪತಿ ಡಾ.ಶಿವಾನಂದ ಸ್ವಾಮಿ, ಸತತ 8 ದಿನಗಳವರೆಗೆ ಅನುಭಾವ ಕವಿ, ತತ್ವಪದಕಾರ ಶ್ರೀ ಕಡಕೋಳ ಮಡಿವಾಳೇಶ್ವರರ ಪುರಾಣ ಕಾರ್ಯಕ್ರಮ ನಡೆಸಿಕೊಟ್ಟರು. ಚಿಗರಹಳ್ಳಿಯ ಮರುಳಶಂಕರ ದೇವರ ಗುರುಪೀಠದ ಸಿದ್ಧಬಸವ ಕಬೀರ ಸ್ವಾಮೀಜಿ, ವರವಿ ಹಿರೇಮಠದ ಮಹಾಂತಯ್ಯ ಸ್ವಾಮಿ ಸಮ್ಮುಖ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಬಿಜೆಪಿ ಮುಖಂಡ ಮಲ್ಲಿನಾಥಗೌಡ ಯಲಗೋಡ, ಶಿವರಾಯಗೌಡ ಪೊಪಾಟೀಲ್, ಗುರುಬಸಪ್ಪಗೌಡ ಮಾಲಿಪಾಟೀಲ್, ಗುಲ್ಬರ್ಗ ಮಹಾನಗರ ಪಾಲಿಕೆ ಸದಸ್ಯ ಸೂರಜ್ ತಿವಾರಿ, ಬಸವರಾಜ ಕೋಣಶಿರಸಿಗಿ, ಸುಭಾಷಗೌಡ ಪೊಪಾಟೀಲ್, ಆಗಮಿಸಿದ್ದರು.
ಕುಡ್ಲಪ್ಪಗೌಡ ಮಾಲಿಪಾಟೀಲ್, ಹಣಮಂತರಾಯಗೌಡ ಪೊಪಾಟೀಲ್, ಮಹಾಲಿಂಗಣ್ಣಗೌಡ ಮಾಲಿಪಾಟೀಲ್, ಮಲ್ಲಣ್ಣ ಸಾಹು ಗುಲ್ಬರ್ಗ, ಕಲ್ಯಾಣರಾಯಗೌಡ ಪ್ರೊ. ಪಾಟೀಲ್, ಬಸವರಾಜಗೌಡ ಮಾಲಿಪಾಟೀಲ್, ಚನ್ನಪ್ಪಗೌಡ ಮಾಲಿಪಾಟೀಲ್, ಭೀಮರಾವ ಪಾಟೀಲ್ ಸೇರಿದಂತೆ ವರವಿ ಗ್ರಾಮಸ್ಥರು, ಮಹಿಳೆಯರು ಪಾಲ್ಗೊಂಡಿದ್ದರು. ಶಿವರುದ್ರಯ್ಯ ಗವಾಯಿ ಗೌಡಗಾಂವ್, ಬಸವರಾಜ್ ನರಿಬೋಳ ಸಂಗೀತ ಸೇವೆ ಸಲ್ಲಿಸಿದ್ದರು. ಸುಭಾಷಗೌಡ ಪೊಲೀಸ್ ಪಾಟೀಲ್ ವರವಿ ನಿರೂಪಿಸಿದರು.