ಆಳಂದ: ದೂರು ದಾಖಲಿಸಲು ಹಿಂದೇಟು
ಆಳಂದ: ವೈಯಕ್ತಿಕ ಕಲಹದ ಕಾರಣ ಮನೆಯ ಧ್ವಂಸಗೊಂಡು, ಬೀದಿಪಾಲಾದ ದೌರ್ಜನ್ಯ ಪೀಡಿತರು ರಕ್ಷಣೆಗಾಗಿ ಆಳಂದ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದರೆ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಪ್ರಕರಣ ವರದಿಯಾಗಿದೆ.
ತಾಲೂಕಿನ ಹೋದಲೂರ ಗ್ರಾಮದ ಬಾಬು ಅಂಬಣ್ಣಾ ಕಾಳೆ ದೂರು ಸಲ್ಲಿಸಿದ ವ್ಯಕ್ತಿಯಾಗಿದ್ದಾರೆ. ತಮ್ಮ ಸಹೋದರ ತಾವು ವಾಸವಾಗಿರುವ ಮನೆಯನ್ನು ಧ್ವಂಸಗೊಳಿಸಿದ್ದು, ಮನೆಯ ಸಾಮಗ್ರಿ ಹಾಗೂ ಪತ್ರಾಸ್‌ಗಳನ್ನುಕಿತು ್ತಹಾಕಿ ದಿನಬಳಕೆ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿ ಮನೆ ಮಂದಿಗೆ ಅವಮಾನ ಮಾಡಿದ್ದಾನೆ. ಹೋದಲೂರ ಗ್ರಾಮದ ಹಣಮಂತ ಮಾರುತಿ ಸೇರಿ ಗುಲ್ಬರ್ಗದಿಂದ ಬಂದ 8 ರಿಂದ 10 ಜನರು ಸೇರಿ ಮನೆಯ ಮೇಲೆ ದಾಳಿ ಮಾಡಿ ಅವಮಾನಗೊಳಿಸಿ ಬೆದರಿಕೆ ಹಾಕಿದ್ದಾರೆ ಎಂದು ಕಾಳೆ ದೂರು ನೀಡಿದ್ದರು.
ನೋಟಿಸ್: ಆದರೆ ಠಾಣಾಧಿಕಾರಿಗಳು ದೂರು ಕೊಟ್ಟ ನನಗೆ ಪುನಃ ನೋಟಿಸ್ ನೀಡಿ ನಿಮ್ಮ ಮನೆಯ ಉತಾರ ಹಾಗೂ ಸಂಬಂಧಪಟ್ಟ ದಾಖಲೆಗಳನ್ನು ಹಾಜರು ಪಡಿಸಬೇಕು. ನೀವು ದಾಖಲೆಗಳು ಹಾಜರುಪಡಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ ಎಂದು ಅವರು ಹೇಳಿದ್ದಾರೆ.
ಅಳಲು: ದೌರ್ಜನ್ಯಕೊಳಗಾದ ನಮ್ಮ ಕುಟುಂಬದ ಪರ ಅರ್ಜಿಕೊಟ್ಟರೆ ರಕ್ಷಣೆ ಕೊಡುವ ಬದಲು ದಾಖಲೆಗಳು ಕೇಳಿ ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಳೆ ಅಳಲು ತೋಡಿಕೊಂಡಿದ್ದಾರೆ.