ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಪರಿಸರ ರಕ್ಷಣೆ ಎಲ್ಲರ ಹೊಣೆ

Mainashree
Updated On : 6 Jun 2014, 10:33 am

ಶಹಾಪುರ: ನಮ್ಮ ಸ್ವಾರ್ಥ ಬದುಕಿನಿಂದ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಆಧುನೀಕರಣದ ಭರಾಟೆ ನೆಪದಲ್ಲಿ ಬೆಳೆಸಿದ ಮರಕ್ಕೂ ಸಂಚಕಾರ ಬಂದಿದೆ ಎಂದು ಸುರಪುರ ಹಿರಿಯ ಶ್ರೇಣಿ ನ್ಯಾಯಾಧೀಶದೇವರಾಜ ಹೇಳಿದರು.
 ಪಟ್ಟಣದ ಕೋರ್ಟ್ ಆವರಣದಲ್ಲಿ ಗುರುವಾರ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.
ಸಂರಕ್ಷಣೆ: ಅರಣ್ಯ ಕೃಷಿಯ ಕರಳುಬಳ್ಳಿಯ ಸಂಬಂಧವನ್ನು ಹೊಂದಿದೆ. ಸಸಿ ನೆಟ್ಟರೆ ಸಾಲದು, ಅದನ್ನು ಬೆಳೆಸುವ ಇಚ್ಛಾಶಕ್ತಿಯನ್ನು ನಾವು ಮೈಗೂಡಿಸಿಕೊಂಡು ಪರಿಸರ ಸಂರಕ್ಷಣೆಗೆ ಮುಂದಾಗಬೇಕು. ನಾವು ಪ್ರಕೃತಿಯ ಒಂದು ಭಾಗವಾಗಿದ್ದೇವೆ. ಮರಗಳನ್ನು ಬೆಳೆಸುವುದರಿಂದ ಮಳೆ, ಶುದ್ಧವಾದ ಗಾಳಿ, ಬೆಳಕು ಮತ್ತು ನೆರಳಿನ ಆಸರೆಯನ್ನು ಪಡೆಯುತ್ತೇವೆ. ಬಿಸಿಲಿನ ಪ್ರಖರತೆಯಿಂದ ದೂರು ಉಳಿಯಲು ಪರಿಸರ ನೆರವು ನೀಡುತ್ತದೆ ಎಂದು ನ್ಯಾಯಾಧೀಶರು ಅಭಿಪ್ರಾಯಪಟ್ಟರು.
ನಿಷ್ಕಾಳಜಿ: ವಕೀಲರಾದ ಆರ್.ಎಂ. ಹೊನ್ನಾರಡ್ಡಿ ಮಾತನಾಡಿ, ಹೈದರಬಾದ್ ಕರ್ನಾಟಕದ ಪ್ರದೇಶದಲ್ಲಿ ಮರಗಳನ್ನು ಬೆಳೆಸುವುದನ್ನು ಅಸಡ್ಡೆ ಎಂದು ಭಾವಿಸಿದ್ದೇವೆ. ಬೇಸಿಗೆ ಕಾಲದಲ್ಲಿ ಬಿಸಿಲಿನ ತೊಂದರೆಯಿಂದ ಸಾಕಷ್ಟು ಹೈರಾಣಗೊಂಡರೂ, ನಾವು ಪರಿಸರದ ಬಗ್ಗೆ ನಿಷ್ಕಾಳಜಿಯನ್ನು ಹೊಂದಿರುವುದು ಬೇಸರದ ಸಂಗತಿ. ನೀರಾವರಿ ಕ್ಷೇತ್ರವೆಂಬ ಹೆಗ್ಗಳಿಕೆ ಪಡೆದ ನಮ್ಮ ಧೋರಣೆ ಬದಲಾಗಬೇಕು. ಸಿಕ್ಕ ಒಂದಿಷ್ಟು ಜಾಗದಲ್ಲಿ ಸಸಿಯನ್ನು ಬೆಳೆಸುವ ಮೂಲಕ ಪರಿಸರ ರಕ್ಷಣೆಗೆ ಮುಂದಾಗಬೇಕೆಂದರು.
 ಸಂಘದ ಉಪಾಧ್ಯಕ್ಷ ಮಲ್ಕಪ್ಪ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ನ್ಯಾಯಾಧೀಶ ವೈ.ಕೆ. ಬೇನಾಳ, ಸರ್ಕಾರಿ ಅಭಿಯೋಜಕ ಎಸ್.ಎಚ್. ಹಕೀಮ್, ಅರಣ್ಯ ಅಧಿಕಾರಿ ಶಾಂತರೆಡ್ಡಿ, ಎಸ್.ಎಂ. ಸಜ್ಜನ್ ವೇದಿಕೆ ಮೇಲೆ ಉಪಸ್ಥಿತರಿದ್ದರು. ಎಂ.ಎನ್. ಪೂಜಾರಿ ನಿರೂಪಿಸಿದರು, ಸ್ವಾಗತ ಶರಬಣ್ಣ, ಬಸಮ್ಮ ರಾಂಪೂರೆ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement