ಗೋಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪರಿಸರ ದಿನ
ಶಹಾಪುರ: ತಾಲೂಕಿನ ಗೋಗಿ ಸರ್ಕಾರಿ ಪ್ರೌಢಶಾಲೆಯಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ವತಿಯಿಂದ ವಿಶ್ವಪರಿಸರ ಜಾಗೃತಿ ಹಾಗೂ ಸ್ವಚ್ಛತಾ ಕಾರ್ಯ ಆಯೋಜಿಸಲಾಗಿತ್ತು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ನವೀದ್ ಚಾಂದ್ ಮಾತನಾಡಿ, ಪರಿಸರ ಸುರಕ್ಷಿತವಾಗಿಡಲು ಮನೆಗೊಂದು ಮರ ಊರಿಗೊಂದು ವನವೆಂಬಂತೆ ನಮ್ಮ ನಾಡು ಉಳಿಸಲು ಪರಿಸರದ ಕಾಳಜಿ ಅಗತ್ಯವಾಗಿದೆ ಎಂದರು. ಜಿಲ್ಲಾ ಖಜಾಂಚಿ ಮಹ್ಮದ್ ನಜೀರ್ ಗೋಗಿ, ಶಹಾಪುರ ಘಟಕದ ಅಧ್ಯಕ್ಷ ವಸೀಮಜ ಮಖಂಡಿ ಮತ್ತು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾದ ಗೋಗಿ ಘಟಕದ ಪದಾಧಿಕಾರಿಗಳು, ಗೋಗಿ ಶಾಲೆಯ ಶಿಕ್ಷಕರು ಮತ್ತು ಸಂಘಟನೆಯ ಪ್ರಮುಖರು ಸಸಿ ನೆಡುವ ಮೂಲಕ ಕಾರ್ಯಕ್ರಮವನ್ನು ನಡೆಸಿಕೊಟ್ಟರು. ಶಿಕ್ಷಕಿ ಖುದೇಜಾ ಬೇಗಂ ಪರಿಸರ ದಿನಾಚರಣೆ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು. ಮುಖ್ಯಗುರು ಮೈನುದ್ದಿನ್ ಬಾಳಿಕಾಯಿ ಅಧ್ಯಕ್ಷತೆ ವಹಿಸಿದ್ದರು. ಹಫಿಜುಲ್ಲಾಖಾನ್ ನಿರೂಪಿಸಿದರು. ಶಾಹಿನಫಾತಿಮಾ ವಂದಿಸಿದರು.