ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ರೈತರಿಗೆ ಬಿತ್ತನೆ ಬೀಜ, ಗೊಬ್ಬರ ವಿತರಣೆ

Vishwanath S
Updated On : 10 Jun 2014, 12:29 pm

ಶಹಾಬಾದ್: ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಸಜ್ಜೆ, ತೊಗರಿ, ಸೂರ್ಯಪಾನ, ಸೊಯಾಬಿನ್, ಉದ್ದು, ಹೆಸರು ಕಾಳು, ಬತ್ತದ ಬೀಜಗಳನ್ನು ಹಾಗೂ ರಸಗೊಬ್ಬರವನ್ನು ವಿತರಿಸಲಾಗುತ್ತಿದೆ ಎಂದು ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಸೈಯದ್ ಪಟೇಲ್ ತಿಳಿಸಿದ್ದಾರೆ. ಶಹಾಬಾದ ರೈತ ಸಂಪರ್ಕ ವಲಯದಲ್ಲಿ ಒಟ್ಟು 12,795 ಹೆಕ್ಟರ್ ಪ್ರದೇಶ ಮುಂಗಾರು ಬಿತ್ತನೆ ಕ್ಷೇತ್ರವಾಗಿದ್ದು, ಹಲವು ಪ್ರದೇಶಗಳಲ್ಲಿ ಅಲ್ಪಸ್ವಲ್ಪ ಮಳೆಯಾಗಿದೆ. ಬಿತ್ತನೆ ಬೀಜ ಸೇರಿದಂತೆ ಹಲವು ಬೆಳೆಗಳ ಬೀಜದ ದಾಸ್ತಾನು ಮತ್ತು ಲಘು ಪೋಷಕಾಂಶ (ಪಿ.ಎಸ್.ಬಿ., ಜಿಂಕ್ ಸಲ್ಫರ್, ಜಿಪ್ಸಂ, ಅಗ್ರಿ ಗೋಲ್ಡ್ ಹಾಗೂ ಎರೆಹುಳು ಗೊಬ್ಬರ) ವಿತರಣೆ ಮಾಡಲಾಗುತ್ತಿದೆ.  ಶಹಾಬಾದ ಕೃಷಿ ವಲಯದ ಹುನಗುಂಟಿ, ತೊನಸನಹಳ್ಳಿ (ಎಸ್), ಮರತೂರ, ಭಂಕೂರ, ಮಾಲಗತ್ತಿ, ಇಂಗಳಗಿ ಹಾಗೂ ಕಡಬೂರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಣ್ಣ ಹಾಗೂ ಅತಿಸಣ್ಣ ರೈತರು ರಿಯಾಯಿತಿ ದರದಲ್ಲಿ ನೀಡಲಾಗುತ್ತಿರುವ ಬೀಜ ಹಾಗೂ ರಸಗೊಬ್ಬರವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ. ಮಾಹಿತಿಗೆ ಕೃಷಿ ಅಧಿಕಾರಿ ಅಥವಾ ಸಹಾಯಕ ಕೃಷಿ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement