ಅನ್ಯಾಯ ವಿರುದ್ಧ ಹೋರಾಟಕ್ಕೆ ಕರವೇ ಸದಾ ಸಿದ್ಧ: ಮಲ್ಲು
ಯಾದಗಿರಿ: ಶೋಷಿತರ, ಅನ್ಯಾಯಕ್ಕೊಳಗಾದ ನಾಡಿನ ಜನರ ಬಗ್ಗೆ ಸದಾಕಾಲ ಹೋರಾಟದ ಮುಖಾಂತರ ನ್ಯಾಯ ಒದಗಿಸಿಕೊಡುವಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಬದ್ಧವಾಗಿದೆ ಎಂದು ಕರವೇ ತಾಲೂಕು ಪ್ರಧಾನ ಕಾರ್ಯದರ್ಶಿ ಮಲ್ಲು ವರ್ಕನಳ್ಳಿ ಹೇಳಿದರು.
ಕರವೇ ರಾಜಾಧ್ಯಕ್ಷ ಟಿ.ಎ. ನಾರಾಯಣಗೌಡರ 48ನೇ ಜನ್ಮದಿನದ ಅಂಗವಾಗಿ ನಗರದ ಕುಷ್ಠರೋಗಿಗಳ ಕಾಲೋನಿ ನಿವಾಸಿಗಳಿಗೆ ಕರವೇ ಜಿಲ್ಲಾ ಘಟಕದಿಂದ ಹೊದಿಕೆ, ಸಮವಸ್ತ್ರ, ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕುಷ್ಠರೋಗಿಗಳಿಗೆ ವೈದ್ಯಕೀಯ ತಪಾಸಣೆ, ವಿದ್ಯುತ್ ಕೊರತೆ ಸೇರಿದಂತೆ ಮೂಲ ಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸಬೇಕು ಎಂದು ಹೇಳಿದರು.
ನೆಲ, ಜಲಕ್ಕೆ ಹೋರಾಟ: ನಂತರ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು ಹಂಪಲ ವಿತರಣೆ ಮಾಡಿ ಮಾತನಾಡಿದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರ್ಜುನ ಪವಾರ, ಇಂದು ಟಿ.ಎ ನಾರಾಯಣಗೌಡರ ಜನ್ಮದಿನವನ್ನು ರಾಜ್ಯಾದ್ಯಂತ ಆಚರಿಸಲಾಗುತ್ತಿದೆ. ನಾಡಿನ ನೆಲ, ಜಲ, ಭಾಷೆಯ ಬಗ್ಗೆ ಅವರು ಹೋರಾಟ ಮಾಡಿದ ನಿದರ್ಶನವೇ ಇದಕ್ಕೆ ಸಾಕ್ಷಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ವೆಂಕಟೇಶ ಮಿಲ್ಟ್ರಿ, ಮಹಾವೀರ ಲಿಂಗೇರಿ, ಭೀಮಾಶಂಕರ ಹತ್ತಿಕುಣಿ, ದೀಪಕ ಬೆಳ್ಳಿ, ರಾಜು ಚವ್ಹಾಣ, ದೇವು ಪೂಜಾರಿ, ಹಣಮಂತ ನಾಯಕ, ಶೇಖಪ್ಪ ಮಲ್ಹಾರ, ಮಲ್ಲು ರಾಮಸಮುದ್ರ, ದಶರಥ ರಾಠೋಡ, ನಿಂಗಪ್ಪ ಗುಡಿಗುಡಿ, ಸಿದ್ದು ಕ್ಯಾಸಪನಳ್ಳಿ, ಸಾಹೇಬಗೌಡ ಗೌಡಿಗೇರಾ, ಶರಣು ಗುತ್ತೆದಾರ, ನರಸಿಂಹರೆಡ್ಡಿ, ಹಣಮಂತ ಅಚ್ಚೋಲಾ, ನಾಗರಾಜ ಹಡಪದ, ಸರ್ವೋತಂ ಗುರುಮಿಠಕಲ್, ಶ್ರೀನಿವಾಶ ಚಾಮನಳ್ಳಿ, ಶಿವು ಇಬ್ರಾಹಿಮಪೂರ, ರಡ್ಡಿ ಅಲ್ಲಿಪೂರ್, ರಾಜು ಪಗಲಾಪೂರ್ ಸೇರಿದಂತೆ ಮತ್ತಿತರರು ಇದ್ದರು.