8 ವರ್ಷದ ಬಾಲಕಿ ಮೇಲೆ ಅತ್ಯಾಚಾರ
ಗುಲ್ಬರ್ಗ: ಶಾಲೆಗೆ ಹೋದ 8 ವರ್ಷದ ಬಾಲಕಿಯನ್ನು ಅತ್ಯಾಚಾರ ಮಾಡಿರುವ ಪ್ರಕರಣ ಗುಲ್ಬರ್ಗ ವಿವಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ತಾಲೂಕಿನ ಮಾಲಗತ್ತಿ ಗ್ರಾಮದ ಶಾಲೆಗೆ ಹೋಗಿದ್ದ ಬಾಲಕಿಯನ್ನು ಆಕೆಯ ಸೋದರ ಮಾವ ಬೈಕ್ನಲ್ಲಿ ಭೂಪಾಲ ತೆಗನೂರ್ ಸೇತುವೆ ಬಳಿ ಕರೆದೋಯ್ದು ಅತ್ಯಾಚಾರ ಮಾಡಿ ಗ್ರಾಮಕ್ಕೆ ಕರೆತಂದು ಬಿಟ್ಟಿದ್ದಾನೆ.
ಶಾಲೆಗೆ ಹೋದ 2ನೇ ತರಗತಿ ಬಾಲಕಿ ಮಧ್ಯಾಹ್ನ ಊಟದ ವಿರಾಮಕ್ಕೆಂದು ಮನೆಗೆ ಬಂದು ವಾಪಸಾಗುವಾಗ ಆಕೆಯ ಸೋದರ ಮಾವ ರಾಣೋಜಿ ಮಲ್ಲಿಕಾರ್ಜುನ ಕೊಡದುರ (22) ಎಂಬ ದುರುಳ, ಆಕೆಯನ್ನು ಬೈಕಿನಲ್ಲಿ ಕೂಡಿಸಿಕೊಂಡು ಭೂಪಾಲತೇಗನೂರ ಸೇತುವೆ ಬಳಿ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬೈಕ್ನಲ್ಲಿ ಕರೆದೊಯ್ಯುವಾಗ ಅಂಗನವಾಡಿ ಶಿಕ್ಷಕಿ ಲಕ್ಷ್ಮೀ ಅವನನ್ನು ವಿಚಾರಿಸಿದಾಗ ಫೋಟೋ ತೆಗೆಸಿಕೊಳ್ಳಲು ಈಕೆಯನ್ನು ಕರೆದುಕೊಂಡು ಹೋಗುತ್ತಿರುವುದಾಗಿ ತಿಳಿಸಿದ್ದಾನೆ.
ಈ ವಿಷಯವನ್ನು ಬಾಲಕಿಯರ ಪಾಲಕರ ಗಮನಕ್ಕೆ ತಂದಾಗ, ಶಿಕ್ಷಕರು ಮತ್ತು ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ. ನಂತರ ಬೈಕ್ನಲ್ಲಿ ಕರೆದೊಯ್ದು ಅತ್ಯಾಚಾರ ಮಾಡಿದ ರಾಣೋಜಿ ಬಾಲಕಿಯನ್ನು ಮತ್ತೆ ಗ್ರಾಮದ ಬಳಿ ತಂದು ಬಿಟ್ಟು ಪರಾರಿಯಾಗಿದ್ದಾನೆ. ಅತ್ಯಾಚಾರಕ್ಕೆ ಒಳಗಾದ ಅಪ್ರಾಪ್ತ ಬಾಲಕಿಯನ್ನು ವೈದ್ಯಕೀಯ ತಪಾಸಣೆಗಾಗಿ ನಗರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆರೋಪಿ ಬಂಧನಕ್ಕೆ ಶೋಧ ನಡೆದಿದೆ.