ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಸೌಲಭ್ಯಕ್ಕೆ ತಾಂಡಗಳನ್ನು ಸರ್ಕಾರಿ ದಾಖಲೆಗೆ ಸೇರಿಸಿ

Vishwanath S
Updated On : 16 Jun 2014, 10:54 am

ಚಿಂಚೋಳಿ: ಲಂಬಾಣಿ ತಾಂಡಾಗಳು ಕಂದಾಯ ಗ್ರಾಮಗಳಾಗಿ ಪರಿವರ್ತಿಸಬೇಕಾದರೆ ತಾಂಡಾ ಕುರಿತು ಸರ್ಕಾರಿ ದಾಖಲೆಯಲ್ಲಿರಬೇಕು. ಇದರ ಬಗ್ಗೆ ಸಮಿತಿ ಅಧ್ಯಯನ ಮಾಡುತ್ತಿದೆ ಎಂದು ಮುಖ್ಯಮಂತ್ರಿ ಆಪ್ತ ಕಾರ್ಯದರ್ಶಿ ಹಾಗೂ ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕ ಬಿ. ಹೀರಾ ನಾಯಕ ಹೇಳಿದರು.
ತಾಲೂಕಿನ ಗಡಿಭಾಗದ ಭೈರಂಪಳ್ಳಿ ತಾಂಡಕ್ಕೆ ಶನಿವಾರ ಭೇಟಿ ನೀಡಿ ಲಂಬಾಣಿ ಸಮುದಾಯದಲ್ಲಿ ಮಾತನಾಡಿ, ತಾಂಡಾಗಳು ಮುಖ್ಯವಾಹಿನಿಯಿಂದ ದೂರ ನೆಲೆಸಿವೆ. ಲಂಬಾಣಿ ಭಾಷೆ, ಸಂಸ್ಕೃತಿ, ಕಲೆ, ಉಳಿಸುವುದು ಮತ್ತು ಲಂಬಾಣಿ ಸಮುದಾಯ ಗೌರವಯುತವಾಗಿ ಬದುಕಲು ತಾಂಡಾಗಳಿಗೆ ಮೂಲಸೌಕರ್ಯ ನೀಡಲು ಕರ್ನಾಟಕ ಲಂಬಾಣಿ ಅಭಿವೃದ್ಧಿ ನಿಗಮದ ಮುಖ್ಯ ಉದ್ದೇಶವಾಗಿದೆ ಎಂದು ತಿಳಿಸಿದರು.
ಹೈ-ಕ ಪ್ರದೇಶದಲ್ಲಿ ಲಂಬಾಣಿ ತಾಂಡಾಗಳಲ್ಲಿ ಜನರಿಗೆ ನಿರ್ದಿಷ್ಟವಾದ ಉದ್ಯೋಗವಿಲ್ಲ. ರಾಜ್ಯದಲ್ಲಿ 3351 ತಾಂಡಾಗಳಲ್ಲಿ ಕೇವಲ 327 ತಾಂಡಾಗಳು ಮಾತ್ರ ಕಂದಾಯ ಗ್ರಾಮಗಳಾಗಿ ಪರಿವರ್ತಿಸಲಾಗಿದೆ. ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಬೇಕಾದರೆ ಎಂದರು.
ಲಂಬಾಣಿ ಲಿಪಿ: ಮುಖ್ಯಮಂತ್ರಿ ಆಪರ ಕಾರ್ಯದರ್ಶಿ ಡಾ. ಸಿಂಧೆ ಭೀಮಸೇನರಾವ ಮಾತನಾಡಿ, ಬಂಜಾರ ಸಮಾಜದ ಸಂಸ್ಕೃತಿ ಭಾಷೆ, ಕಲೆ, ನಡತೆ ಕಾಪಾಡಿಕೊಳ್ಳಬೇಕಾದರೆ ಮೊದಲು ಮಾತೃಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಬೇಕು. ವ್ಯಕ್ತಿಯ ವಿಕಸನ ಆಗಬೇಕಾದರೆ ಶಿಕ್ಷಣ ಅಗತ್ಯ. ಲಂಬಾಣಿ ಭಾಷೆ ಲಿಪಿ ಸಂಶೋಧನೆ ಹೈದ್ರಾಬಾದ್ ಉಸ್ಮಾನಿಯ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿದೆ ಎಂದರು.
ಶಾಸಕ ಡಾ. ಉಮೇಶ ಜಾಧವ್ ಮಾತನಾಡಿ, ತಾಲೂಕಿನಲ್ಲಿ 120 ತಾಂಡಾಗಳಿದ್ದು ಅನೇಕ ಸಮಸ್ಯೆಗಳು ಎದುರಿಸುತ್ತಿವೆ. ಅಂಡಮಾನ್- ನಿಕೋಬಾರ್ ಪ್ರದೇಶದಲ್ಲಿ ಇದ್ದ ಹಾಗೇ ತಾಂಡಾಗಳಿವೆ ಇವುಗಳ ಸುಧಾರಣೆ ಅಗತ್ಯವಾಗಿದೆ ಎಂದು ತಿಳಿಸಿದರು.
ಮಿರಿಯಾಣ ಗ್ರಾಪಂ ಅಧ್ಯಕ್ಷ ಬಸವರಾಜ, ಕೆ. ರಾಮಚಂದ್ರ ಜಾಧವ್, ಅಬ್ದುಲ್ ರವೂಫ್, ಪವನ ಪವಾರ. ಕೆ.ಎಂ. ಬಾರಿ, ಅಬ್ದುಲ್ ಬಾಸೀತ್, ಶಿವಕುಮಾರ ಕೊಳ್ಳುರ, ಗಣಪತರಾವ್, ರಾಮಶೆಟ್ಟಿ ಪವಾರ, ಮಾರುತಿ ಜಮಾದಾರ, ಬಸವಣ್ಣ ಪಾಟೀಲ್ ಸೇರಿದಂತೆ ಇನ್ನಿತರಿದ್ದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement