ಅಳ್ಳೊಳ್ಳಿ ಆಸ್ಪತ್ರೆ ಅವ್ಯವಸ್ಥೆ: ಆರೋಪ
ಚಿತ್ತಾಪುರ: ತಾಲೂಕಿನ ಅಳ್ಳೊಳ್ಳಿ ಪ್ರಾಥಮಿಕ ಅರೋಗ್ಯ ಕೇಂದ್ರದ ಅವ್ಯವಸ್ಥೆಯಿಂದ ಕೂಡಿದೆ ಎಂದು ಕರವೇ ಅಳ್ಳೊಳ್ಳಿ ಘಟಕ ಸಂಚಾಲಕ ಮಹಾದೇವ ತೆಲಗೂರ ಆರೋಪಿಸಿದ್ದಾರೆ. 5 ಸಾವಿರ ಜನಸಂಖ್ಯೆಯಿರುವ ಅಳ್ಳೊಳ್ಳಿ ಗ್ರಾಮ ತಾಪಂ ಹಾಗೂ ಗ್ರಾಪಂ ಕೇಂದ್ರ ಸ್ಥಾನವಾಗಿದ್ದರೂ ಗ್ರಾಮಕ್ಕೆ ಸೌಲಭ್ಯಗಳು ಅಷ್ಟಕಷ್ಟೇ. ಆಸ್ಪತ್ರೆಯಲ್ಲಿ ಸಿಬ್ಬಂದಿ ಕೊರತೆ ಕಾಡುತ್ತಿದೆ. ಹಾಗಾಗಿ ಜನರ ಆರೋಗ್ಯ ಕೆಟ್ಟರೆ ವಿಧಿಯಿಲ್ಲದೆ ಚಿತ್ತಾಪುರ ಇಲ್ಲವೇ ಯಾದಗಿರಿ ಆಸ್ಪತ್ರೆಯೇ ಗತಿ.