ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಶರಣಬಸವ ಕೆಂಗುರಿ ಪುತ್ಥಳಿ ಅನಾವರಣ

Rashmi Kasaragodu
Updated On : 18 Jun 2014, 11:32 am

ಸುರಪುರ: 'ದೇಶ ಸೇವೆಯೇ ಈಶ ಸೇವೆ' ಎನ್ನುವಂತೆ ಯುವಕರು ದೇಶದ ರಕ್ಷಣೆಗಾಗಿ ಸೇನೆಗೆ ಸೇರ್ಪಡೆಗೊಳ್ಳುವತ್ತ ಹೆಚ್ಚಿನ ಆಸಕ್ತಿ ವಹಿಸಬೇಕು. ಎಲ್ಲ ಸೇವೆಗಿಂತ ದೇಶ ಸೇವೆ ಅಮೂಲ್ಯ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಕರೆ ನೀಡಿದರು. ಇಲ್ಲಿಯ ಸರ್ಕಾರಿ ನೌಕರರ ಭವನದ ಹತ್ತಿರದಲ್ಲಿ ಕವಡಿಮಟ್ಟಿ ಗ್ರಾಮದ ಹುತಾತ್ಮ ಯೋಧ ಶರಣಬಸವ ಕೆಂಗುರಿ ಅವರ ಕಂಚಿನ ಪುತ್ಥಳಿಯನ್ನು ಮಂಗಳವಾರ ಅನಾವರಣಗೊಳಿಸಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ತಿಂಥಣಿ ಬ್ರಿಡ್ಜ್‌ನ ಕನಕ ಗುರುಪೀಠದ ಸಿದ್ದರಾಮಾನಂದ ಸ್ವಾಮಿ ಮಾತನಾಡಿದರು. ಪುರಸಭೆ ಅಧ್ಯಕ್ಷ ದೇವಿಂದ್ರಪ್ಪ ಕಳ್ಳಿಮನಿ, ರಾಜಶೇಖರಗೌಡ ವಜ್ಜಲ್, ಯೋಧ ನಿಂಗಣ್ಣ ಚಂದಲಾಪುರ, ಮಾಜಿ ಯೋಧ ಈರಣ್ಣ ಅಸ್ಕಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement