ನಮೋಶಿ ಪರ ಪ್ರಚಾರ
ಆಳಂದ: ತಾಲೂಕಿನ ನಿಂಬರ್ಗಾ ವಲಯದ ಹಲವು ಗ್ರಾಮಗಳಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸಂತೋಷ ಹಾದಿಮನಿ ನೇತೃತ್ವದಲ್ಲಿ ಶಿಕ್ಷಕರ ಕ್ಷೇತ್ರದ ಎಂಎಲ್‌ಸಿ ಅಭ್ಯರ್ಥಿ ಶಶಿಲ್ ನಮೋಶಿ ಪರ ಪ್ರಚಾರ ಮಾಡಿದರು. ಬಳಿಕ ಮಾತನಾಡಿ, ಜೆಒಸಿ ಶಿಕ್ಷಕರ ಸೇವೆ ಕಾಯಂ, ಪದವಿ ಮಹಾವಿದ್ಯಾಲಯಗಳಲ್ಲಿ ಅತಿಥಿ ಉಪನ್ಯಾಸಕರ ವೇತನ ಹೆಚ್ಚಳ, 6ನೇ ವೇತನ ಆಯೋಗ ಜಾರಿ ಮುಂತಾದ ಜನಪರ ಕೆಲಸಗಳನ್ನು ಮಾಡಿದೆ. ಚುನಾವಣೆಯಲ್ಲಿ ಶಶಿಲ್ ನಮೋಶಿಗೆ ಮತ ನೀಡುವಂತೆ ವಿನಂತಿಸಿದರು. ಮುಖಂಡ ಶಿವಪ್ಪ ನಾಗಶೆಟ್ಟಿ, ಶ್ರೀಶೈಲ್ ಪಾಟೀಲ್ ಕಡಗಂಚಿ, ಶರಣು ಬೆಳಮಗಿ, ಮಲ್ಲಿನಾಥ ವಡಿಯರ, ರೇವಣಸಿದ್ದಪ್ಪ ಪಟ್ನೆ, ಕಾರ್ಯಕರ್ತರು ಇದ್ದರು. ಧಂಗಾಪುರ, ಭೂಸನೂರ, ದೇವಂತಗಿ, ಮಾಡಿಯಾಳ, ಯಳಸಂಗಿ ಗ್ರಾಮಗಳಲ್ಲಿ ಶಿಕ್ಷಕರನ್ನು ಭೇಟಿ ಮಾಡಿ ಮತ ಯಾಚಿಸಲಾಯಿತು.