ಬಿರಾದಾರ ಪರ
ಗುಲ್ಬರ್ಗ: ಪಕ್ಷೇತರ ಅಭ್ಯರ್ಥಿ ಲಿಂಗರಾಜ ಬಿರಾದಾರಗೆ ಶಿಕ್ಷಕರು ಮತ ನೀಡಿ ಗೆಲ್ಲಿಸುವಂತೆ ಶಿಕ್ಷಕ, ಉಪನ್ಯಾಸಕರಿಗೆ ಭಾರತೀಯ ದಲಿತ ಪ್ಯಾಂಥರ ವಿಭಾಗೀಯ ಸಮಿತಿ ವಿನಂತಿಸಿದೆ. 30 ವರ್ಷಗಳಿಂದ ಬಿರಾದಾರ ಶಿಕ್ಷಕರ ಜತೆ ನಿರಂತರ ಸಂಪರ್ಕ ಹೊಂದಿದ್ದು, ಮುಂದಿನ ದಿನಗಳಲ್ಲಿ ಅವರು ಶಿಕ್ಷಕರಿಗೆ ಧ್ವನಿಯಾಗಿ ಕೆಲಸ ಮಾಡಲಿದ್ದು, ಮತ ನೀಡಬೇಕೆಂದು ಮನವಿ ಮಾಡಿದೆ.
ದಸಂಸ ಮತ ಯಾಚನೆ: ಲಿಂಗರಾಜ ಬಿರಾದಾರಗೆ ಮತ ನೀಡುವಂತೆ ದಸಂಸ ಶಿಕ್ಷಕರಲ್ಲಿ ವಿನಂತಿಸಿದೆ. ಶಿಕ್ಷಣ ಕ್ಷೇತ್ರದಿಂದ ಆಯ್ಕೆಯಾದವರು ಇಲ್ಲಿವರೆಗೆ ಗಮನಾರ್ಹ ಕಾರ್ಯ ಮಾಡಿಲ್ಲ. ಶಿಕ್ಷಣ ಕ್ಷೇತ್ರದ ಸಮಸ್ಯೆಗಳನ್ನರಿತ ಬಿರಾದಾರಗೆ ಮತ ಹಾಕುವಂತೆ ಸಮಿತಿ ಜಿಲ್ಲಾ ಸಂಚಾಲಕ ರವಿ ಎಂ. ಮದನಕರ್ ಶಿಕ್ಷಕ ಸಮುದಾಯವನ್ನು ಕೋರಿದ್ದಾರೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.