ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಎಕರೆಗೊಂದೇ ಆಲದ ಮರ!

Rashmi Kasaragodu
Updated On : 20 Jun 2014, 12:06 pm

ಚಿಂಚೋಳಿ: ತಾಲೂಕಿನ ಕಲ್ಲು ಗಣಿ ಪ್ರದೇಶದ ಭೈರಂಪಳ್ಳಿ ಗ್ರಾಮದಲ್ಲಿರುವ ಐತಿಹಾಸಿಕ ಆಲದ ಮರ ಎಲ್ಲರ ಗಮನ ಸೆಳೆಯುತ್ತಿದೆ. ತಾಲೂಕಿನ ಮಿರಿಯಾಣ ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಭೈರಂಪಳ್ಳಿ ಗ್ರಾಮದಲ್ಲಿ ನೈಸರ್ಗಿಕವಾಗಿ ಬೆಳೆದಿರುವ ಅಲದ ಮರ ಸುಮಾರು ಒಂದು ಎಕರೆ ಪ್ರದೇಶದಲ್ಲಿದ್ದು, ಒಂದೇ ಆಲದ ಮರಕ್ಕೆ ಯಾವುದು ಬುಡ ಯಾವುದು ಬೇರು ಇದೆ ಎಂದು ಹುಡುಕುವುದು ಕಷ್ಟಸಾಧ್ಯ ಎನ್ನುವಂತಾಗಿದೆ. ಮರದ ಬೇರುಗಳು ಒಂದಕ್ಕೊಂದು ಜೋಡಣೆಯಾಗಿದ್ದು, ಒಂದೇ ಬಳ್ಳಿಯಂತೆ ಹೊಂದಿಕೊಂಡಿದ್ದು, ನೋಡುಗರಿಗೆ ಸುಂದರ ಎನಿಸುತ್ತದೆ.
ಆಲದ ಮರ ಹೂ ಮತ್ತು ಹಣ್ಣುಗಳಿಂದ ಕೂಡಿದ್ದು ಕೆಂಪು ಹಣ್ಣುಗಳಿಂದ ಕೂಡಿದ ಆಲದ ಮರಕ್ಕೆ ಮುತ್ತಿನಿಂದ ಪೋಣಿಸಿದಂತೆ ಕಂಗೊಳಿಸುತ್ತಿವೆ. ಆಲದ ಮರಗಳಲ್ಲಿ ಕೋಗಿಲೆಗಳ ಇಂಪಾದ ಗಾಯನ, ಗುಬ್ಬಚ್ಚಿಗಳ ಕಲರವ, ಕಾಗೆಗಳ ಕೂಗು ಮತ್ತು ಬೆಳ್ಳಕ್ಕಿಗಳ ವಾಸವಾಗಿರುವ ಬೇಸಿಗೆಯಲ್ಲಿ ಮರದ ಮರಗಳ ತಣ್ಣನೆಯ ಗಾಳಿಯ ತಂಪು ನೆರಳಿನಲ್ಲಿ ಕುಳಿತರೆ ಮನಸಿಗೆ ಉಲ್ಲಾಸ ನೀಡುವ ಸುಂದರ ಪ್ರದೇಶವಾಗಿದೆ. ಆಲದ ಮರಗಳ ಗಾಳಿ ಸವಿದರೆ ಮೈಯಲ್ಲಿನ ರೋಗಗಳು ವಾಸಿಯಾಗುತ್ತವೆ ಎಂಬು ಇಲ್ಲಿನ ಜನರ ನಂಬಿಕೆ. ಗಡಿಪ್ರದೇಶದಲ್ಲಿರುವ ಭೈರಂಪಳ್ಳಿ ಕೇವಲ ಗಣಿ ಪ್ರದೇಶಕ್ಕೆ ಹೆಸರು ವಾಸಿಯಾಗಿದ್ದು, ಇಂತಹ ಐತಿಹಾಸಿಕವಾಗಿರುವ ನೈಸರ್ಗಿಕವಾಗಿ ಬೆಳೆದಿರುವ ಆಲದ ಮರ ರಕ್ಷಣೆ ಅರಣ್ಯ ಇಲಾಖೆ ಇತ್ತ ಗಮನ ಹರಿಸಬೇಕಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement