ನೇಣು ಹಾಕಿದ್ದ ಬಾಲಕಿ ಶವ ಪರೀಕ್ಷೆ
ಚಿಂಚೋಳಿ: ತಾಲೂಕಿನ ಚಿಮ್ಮಾ ಇದಲಾಯಿ ಗ್ರಾಮದಲ್ಲಿ ಕಳೆದ ಮೇ.20ರಂದು ಅಕ್ಷತಾ (12) ಎಂಬ ಬಾಲಕಿಯನ್ನು ನೇಣು ಹಾಕಿ ಕೊಲೆ ಮಾಡಲಾಗಿತ್ತು. ಪ್ರಕರಣ ಸಂಬಂಧ ಬುಧವಾರ ಬಾಲಕಿಯ ಶವ ಪರೀಕ್ಷೆಯನ್ನು ತಹಸೀಲ್ದಾರ್ ಸಮ್ಮುಖದಲ್ಲಿ ನಡೆಸಲಾಯಿತೆಂದು ಸಿಪಿಐ ಇಸ್ಮಾಯಿಲ್ ಶರೀಫ್ ತಿಳಿಸಿದ್ದಾರೆ. ಕೂಲಿ ಕೆಲಸಕ್ಕಾಗಿ ಹೊಲಕ್ಕೆ ಹೋಗಿದ್ದ ಸಮಯದಲ್ಲಿ ಕ್ಷುಲ್ಲಕ ಜಗಳಕ್ಕೆ ಬಾಲಕಿ ಕಣ್ಣಿಗೆ ಕಾರದ ಪುಡಿ ಹಾಕಿ ಹೊಡೆದಾಗ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ಆಕೆಯನ್ನು ಮನೆಯಲ್ಲಿಯೇ ನೇಣು ಹಾಕಿದ್ದರು. ಚಿಂಚೋಳಿ ತಹಸೀಲ್ದಾರ್ ಯಲ್ಲಪ್ಪಾ ಸುಬೇದಾರ, ಸಿಪಿಐ ಇಸ್ಮಾಯಿಲ್ ಶರೀಪ್ ಮರಿಯಾಣ ಪಿಎಸೈ ರಾಘವೇಂದ್ರ ಮತ್ತು ಗ್ರಾಮಸ್ಥರ ಸಮ್ಮುಖದಲ್ಲಿ ಬಾಲಕಿಯ ಶವ ಹೊರಕ್ಕೆ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು. ಕೊಲೆ ಆರೋಪಿಗಳು ಪರಾರಿಯಾಗಿದ್ದು, ಶೋಧನ ಕಾರ್ಯ ನಡೆದಿದೆ ಎಂದು ಸಿಪಿಐ ಇಸ್ಮಾಯಿಲ್ ಶರೀಫ್ ತಿಳಿಸಿದ್ದಾರೆ.