ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾರದ ಮಳೆ ಆಕಾಶದತ್ತ ರೈತನ ಮೊಗ

Rashmi Kasaragodu
Updated On : 20 Jun 2014, 12:08 pm

ಚಿಂಚೋಳಿ: ತಾಲೂಕಿನಲ್ಲಿ ರೈತರ ನಿರೀಕ್ಷೆಯಂತೆ ಜೂನ್ ತಿಂಗಳು ಪ್ರಾರಂಭಗೊಂಡು ಮೂರು ವಾರ ಗತಿಸಿದರೂ ಮಳೆಯಾಗದಿರುವುದರಿಂದ ತಾಲೂಕಿನ ಕೆಲವು ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯ ಸ್ಥಗಿತಗೊಳಿಸಿ ಮಳೆರಾಯನ ಆಗಮನಕ್ಕಾಗಿ ಮುಖ ಮಾಡಿದ್ದಾರೆ. ತಾಲೂಕಿನ ಐನಾಪೂರ ಮತ್ತು ಚಿಮ್ಮನಚೋಡ, ಗಡಿಲಿಂಗದಳ್ಳಿ, ಸಲಗರ ಬಸಂತಪೂರ ಚಂದನಕೇರಾ, ಚೇಂಗಟಾ ಗ್ರಾಮಗಳ ಸುತ್ತಲಿನ ತಾಂಡಾಗಳಲ್ಲಿ ಸ್ವಲ್ಪಮಟ್ಟಿಗೆ ಮಳೆಯಾಗಿದ್ದರಿಂದ ರೈತರು ಮುಂಗಾರು ಬಿತ್ತನೆಯನ್ನು ಸಂತಸದಿಂದ ಚಾಲನೆ ನೀಡಿದ್ದರು. ಆದರೆ ಕಳೆದ ಒಂದು ವಾರದಿಂದ ಮಳೆಯಾಗದೇ ಇರುವುದರಿಂದ ಕೆಲವು ಗ್ರಾಮಗಳಲ್ಲಿ ರೈತರು ಬಿತ್ತನೆ ಕಾರ್ಯ ಸ್ಥಗಿತಗೊಳಿಸಿದ್ದಾರೆ. ತಾಲೂಕು ಕೃಷಿ ಇಲಾಖೆ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಜೂನ್ ತಿಂಗಳಲ್ಲಿ ವಾಡಿಕೆಯಂತೆ 147.9 ಮಿಮೀ ಮಳೆಯಾಗಬೇಕು. ಆದರೆ ಇದುವರೆಗೆ ಚಿಮ್ಮನಚೋಡ ವಲಯದಲ್ಲಿ 20.4 ಮಿಮೀ ಮತ್ತು ಐನಾಪೂರ ವಲಯದಲ್ಲಿ 42.8 ಮಿಮಿ ಮಳೆಯಾಗಿದೆ. ಇನ್ನುಳಿದ ಕೋಡ್ಲಿ, ಕುಂಚಾವರಂ, ಚಿಂಚೋಳಿ, ಸುಲೇಪೇಟ ವಲಯದಲ್ಲಿ ಅಲ್ಪ ಮಳೆಯಾಗಿದೆ. ಹೀಗಾಗಿ ಇಲ್ಲಿ ರೈತರು ಬಿತ್ತನೆ ಕಾರ್ಯ ಪ್ರಾರಂಭಿಸಿಲ್ಲ.
ತಾಲೂಕಿನಲ್ಲಿ ಮಳೆಗಾಗಿ ವಿವಿಧ ದೇವಾಲಯಗಳಲ್ಲಿ ಪೂಜೆ, ಅಭಿಷೇಕ ಮತ್ತು ಬುಟ್ಟಿ ಜಾತ್ರೆ ಪ್ರಾರಂಭಗೊಂಡಿವೆ. ಸದ್ಯ ಮಳೆ ಅಭಾವದಿಂದ ರೈತರು ಮುಗಿಲಿನತ್ತ ನೋಡುವಂತಾಗಿದೆ.



Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement