ಮಾರ್ಕೆಟ್ ನಿರ್ವಹಣೆ ತರಬೇತಿ ಶಿಬಿರ
ರಾಯಚೂರು: ಸಸ್ಯ ಸಂರಕ್ಷಣ ರಸಾಯನಿಕಗಳ ಮಾರುಕಟ್ಟೆ ನಿರ್ವಹಣೆ ಬಗ್ಗೆ ಮೂರು ದಿನಗಳ ತರಬೇತಿ ಕಾರ್ಯಕ್ರಮವನ್ನು ಇತ್ತೀಚೆಗೆ ಇಲ್ಲಿನ ಕೃಷಿ ವಿವಿಯಲ್ಲಿ ಆಯೋಜಿಸಲಾಗಿತ್ತು. ಕರ್ನಾಟಕದ ವಿವಿಧ ರಸಾಯನಿಕ ಕಂಪನಿಗಳ ಸಿಬ್ಬಂದಿಗೆ ಕೃಷಿ ವಿಶ್ವವಿದ್ಯಾಲಯದಲ್ಲಿ, ಇಂಟರ್ ಫೇಸ್ ಅಗ್ರಿಕಲ್ಚರಲ್ ಟೆಕ್ನಾಲಾಜಿಸ್ ಹೈದರಾಬಾದ್ ಸಹಯೋಗದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಕುಲಪತಿ ಡಾ. ಬಿ.ಎಸ್. ಜನಗೌಡರ ಶಿಬಿರಕ್ಕೆ ಚಾಲನೆ ನೀಡಿದರು. ಶಿಕ್ಷಣ ನಿರ್ದೇಶಕರ ಡಾ. ಬಿ.ವಿ. ಪಾಟೀಲ್, ವಿಸ್ತರಣಾ ನಿರ್ದೇಶಕ ಡಾ. ಕೆ.ಪಿ. ವಿಶ್ವನಾಥ, ಕೃಷಿ ತಜ್ಞರಾದ ಡಾ. ಪ್ರಮೋದ ಕಟ್ಟಿ, ಡಾ. ಕುಮಾರ್, ಡಾ. ರಾಮಚಂದ್ರಮೂರ್ತಿ ಪಿ., ಸೋಮಶೇಖರ್ ಅವರಿದ್ದರು.