ಸಂಸದ ಖರ್ಗೆ ಪ್ರವಾಸ
ಗುಲ್ಬರ್ಗ: ಸಂಸದ ಡಾ. ಮಲ್ಲಿಕಾರ್ಜುನ ಖರ್ಗೆ ಜೂ. 19, 20ರಂದು ನಗರದ ಸ್ಥಳೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಜೂ. 21ರ ಬೆಳಗ್ಗೆ 7ಕ್ಕೆ ಸೇಡಂಗೆ ಪ್ರಯಾಣಿಸುವರು. ಮಧ್ಯಾಹ್ನ 1 ತೆಲಂಗಾಣ ಖಮ್ಮಂ ಗ್ರಾಮದಲ್ಲಿ ರಾಜೀವ್ ಗಾಂಧಿ ಮೂರ್ತಿ ಅನಾವರಣ ಮಾಡುವರು. ರಾತ್ರಿ 8.15ಕ್ಕೆ ಹೈದ್ರಾಬಾದಿನಲ್ಲಿ ವಾಸ್ತವ್ಯ ಮಾಡುವರು.
ಪಿಯು ಪ್ರವೇಶ: ಪೋಷಕರಿಗೆ ಸೂಚನೆ
ರಾಯಚೂರು: ಜಿಲ್ಲೆಯಲ್ಲಿ 2014-15ನೇ ಸಾಲಿನಲ್ಲಿ ವಿವಿಧ ಸಂಸ್ಥೆಗಳ ಅಡಿಯಲ್ಲಿ ಪದವಿ ಪೂರ್ವ ಕಾಲೇಜುಗಳನ್ನು ಪ್ರಾರಂಭಿಸಿದ್ದು, ಪ್ರವೇಶ ಪಡೆಯುವ ಮುನ್ನ ಪಾಲಕರು ಪರಿಶೀಲಿಸುವಂತೆ ಡಿಡಿಪಿಯು ಕಚೇರಿ ತಿಳಿಸಿದೆ. ಪದವಿ ಪೂರ್ವ ಇಲಾಖೆ ಅನುಮತಿ ಪಡೆಯದೇ ಆರಂಭಗೊಂಡ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಾರದು. ಪೋಷಕರು, ವಿದ್ಯಾರ್ಥಿ/ ವಿದ್ಯಾರ್ಥಿನಿಯರು ಪ್ರವೇಶ ಪಡೆಯುವ ಮುನ್ನ ಪರಿಶೀಲಿಸಬೇಕು. ಪ್ರವೇಶ ಪಡೆದಲ್ಲಿ ಮುಂದಿನ ಹಾಗು- ಹೋಗುಗಳಿಗೆ ಪಾಲಕರು ಹಾಗೂ ವಿದ್ಯಾರ್ಥಿಗಳೇ ಹೊಣೆಯಾಗುತ್ತಾರೆಂದು ಪ.ಪೂ. ಶಿಕ್ಷಣ ಇಲಾಖೆ ಎಚ್ಚರಿಸಿದೆ. ಹೆಚ್ಚಿನ ಮಾಹಿತಿಗೆ ಕಾಲೇಜುಗಳ ವಿವರಕ್ಕೆ ಸಂಬಂಧಿಸಿ ಡಿಡಿಪಿಯು ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.