ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಅಂಚೆ ಕಚೇರಿಯಲ್ಲಿ 60 ಬಗೆಯ ಕಾರ್ಡ್ ಮಾರಾಟ

Rashmi Kasaragodu
Updated On : 22 Jun 2014, 12:07 pm

ಆಳಂದ: ಅಂಚೆ ಇಲಾಖೆಯಿಂದ ಚಿತ್ರಸಹಿತ ಇರುವ 60 ಬಗೆಯ ಆಕರ್ಷಕ ಕಾರ್ಡ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ದೇಶದ ಎಲ್ಲಾ ಅಂಚೆ ಕಚೇರಿಗಳಲ್ಲಿ ಮಾರಾಟ ಮಾಡಿದಂತೆ ಸ್ಥಳೀಯ ಅಂಚೆ ಕಚೇರಿಯಲ್ಲೂ ಮಾರಾಟ ಮಾಡಲಾಗುತ್ತಿದೆ.  ಸಾರ್ವಜನಿಕರು ತಮ್ಮ ಬಂಧು, ಬಾಂಧವರಿಗೆ ವಿಶೇಷವಾಗಿ ಮಕ್ಕಳಿಗೆ ಕಳುಹಿಸಿಕೊಡಬಹುದಾದ ಆಕರ್ಷಕವಾದ ಈ ಚಿತ್ರ ಕಾರ್ಡ್ ಬೆಲೆ ಕೇವಲ 3 ಮಾತ್ರ. ಈ ಮೂರು ರುಪಾಯಿ ಕಾರ್ಡ್‌ಗೆ 6 ಅಂಚೆ ಟಿಕೆಟ್ ಹಚ್ಚಿ ಪರ ಊರು, ದೇಶ ವಿದೇಶಕ್ಕೂ ತಮ್ಮವರಿಗೆ ಕಳುಹಿಸಿಕೊಡಬಹುದು.  ನಿಸರ್ಗ, ಪ್ರಾಣಿ, ಪಕ್ಷಿ, ಪ್ರವಾಸಿ ತಾಣ, ದೇವಾಲಯ ಹೀಗೆ ವಿವಿಧ 60 ಬಗೆಯ ವಿನ್ಯಾಸದ ದೇಶದ ಮೂಲೆ ಮೂಲೆ ಕಳುಹಿಸಿಕೊಡಲು ಮತ್ತು ಮನೆಯಲ್ಲಿ ಮಕ್ಕಳಿಗೆ ಈ ಕುರಿತು ಜ್ಞಾನ ತಿಳಿವಳಿಕೆ ಮೂಡಿಸಲು ಐತಿಹಾಸಿಕವಾದ ತಾಣದ ಚಿತ್ರ ಒಳಗೊಂಡ ಗುಣಮಟ್ಟದ ಕಾರ್ಡ್‌ಗಳಿವೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement