ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಕಾರ್ಯಾಗಾರ ಮುಂದೂಡಿಕೆ

Rashmi Kasaragodu
Updated On : 22 Jun 2014, 12:09 pm

ಯಾದಗಿರಿ: ನೂತನ ಜವಳಿ ನೀತಿ ಯೋಜನೆಯಡಿ ನೀಡಲಾಗುವ ವಿವಿಧ ಸೌಲಭ್ಯಗಳ ಕುರಿತು ಕೈಮಗ್ಗ ಮತ್ತು ಜವಳಿ ಇಲಾಖೆಯಿಂದ ಜೂ.24ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದೆ ಎಂದು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ನೇಮಕ ಪರೀಕ್ಷೆ 29ಕ್ಕೆ
ಯಾದಗಿರಿ: ಜಿಲ್ಲೆಯಲ್ಲಿ ಸಮೂಹ ಸಂಪನ್ಮೂಲ ವ್ಯಕ್ತಿಗಳ(ಸಿಆರ್‌ಪಿ) ಮತ್ತು ಬ್ಲಾಕ್ ಸಂಪನ್ಮೂಲ ವ್ಯಕ್ತಿಗಳ (ಬಿಆರ್‌ಪಿ) ಹುದ್ದೆಗಳ ಲಿಖಿತ ಪರೀಕ್ಷೆಯು ಜೂ.29ರಂದು ಬೆ.10.30ರಿಂದ ಮ.12ರವರೆಗೆ ನಡೆಯಲಿದೆ. ಈ ಪರೀಕ್ಷೆಗಳು ಸರ್ಕಾರಿ ಪ್ರೌಢಶಾಲೆ ಸ್ಟೇಶನ್ ಬಜಾರ್ ಯಾದಗಿರಿ ಶಾಲೆಯಲ್ಲಿ ನಡೆಯುವ ಪ್ರಯುಕ್ತ ಈ ಪರೀಕ್ಷೆಗೆ ನೋಡಲ್ ಅಧಿಕಾರಿಗಳು, ಪೊಲೀಸ್ ಬಂದೋಬಸ್ತ್ ಮತ್ತು ಜಾಗೃತಿ ದಳದ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಪ್ರಾಂಶುಪಾಲರು ಜಿಲ್ಲಾ ಶಿಕ್ಷಣ ಮತ್ತು ತರಬೇತಿ ಸಂಸ್ಥೆ ಡಯಟ್ ತಿಳಿಸಿದೆ.



ಚಿಕಿತ್ಸೆ ನೀಡದ ವೈದ್ಯಾಧಿಕಾರಿ ಸಚಿವರಿಗೆ ಜಿಪಂ ಸದಸ್ಯೆ ಪತ್ರ
ಯಾದಗಿರಿ: ತಮಗೆ ಚಿಕಿತ್ಸೆ ನೀಡಿಲ್ಲವೆಂದು ವಡಗೇರಾ ಜಿಪಂ ಕ್ಷೇತ್ರದ ಸದಸ್ಯರು ವೈದ್ಯಾಧಿಕಾರಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ಪತ್ರ ಬರೆದಿದ್ದಾರೆ. ಜಿಪಂ ಸದಸ್ಯೆ ಪಾರ್ವತಮ್ಮ ಕಾಡಂನೂರ ಎಂಬುವವರಿಗೆ ಕಾಲು ಜಾರಿ ಬಿದ್ದ ಪರಿಣಾಮ ಕೈ ಮೂಳೆಗೆ ಪಟ್ಟಾಗಿರುವ ಕಾರಣ ಚಿಕಿತ್ಸೆಗೆಂದು ಯಾದಗಿರಿ ಜಿಲ್ಲಾ ಆಸ್ಪತ್ರೆಯ ಎಲಬು ಮತ್ತು ಕೀಲು ತಜ್ಞರ ಬಳಿ ಶುಕ್ರವಾರ ಬಂದಿದ್ದಾರೆ. ಕೈ ಸ್ಕ್ಯಾನಿಂಗ್ ಮಾಡಿಸಲು ಸಲಹೆ ನೀಡಿದ ವೈದ್ಯರು ನಂತರ, ಆಸ್ಪತ್ರೆಯಲ್ಲಿ ಕೈ ಮೂಳೆಗೆ ಚಿಕಿತ್ಸೆ ನೀಡಲು ಉಪಕರಣಗಳಿಲ್ಲ ಎಂದು ತಿಳಿಸಿದ್ದಾರೆ. ಆದರೆ ಪಾರ್ವತಮ್ಮ ಹೊರಗಿನಿಂದ ಉಪಕರಣ ತರಿಸುದಾಗಿ ವೈದ್ಯರಿಗೆ ತಿಳಿಸಿದಾಗ ಅವರು ಚಿಕಿತ್ಸೆ ನೀಡಲು ನಿರಾಕರಿಸಿದರು ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಸದಸ್ಯೆ ಪಾರ್ವತಮ್ಮ ಕಾಡಂನೂರ, ಒಬ್ಬ ಜನಪ್ರತಿನಿಧಿಗೆ ಚಿಕಿತ್ಸೆ ನೀಡಲು ಹಿಂದೇಟು ಹಾಕುವ ಸರ್ಕಾರಿ ವೈದ್ಯಾಧಿಕಾರಿಗಳು ಇನ್ನು ಜನಸಾಮಾನ್ಯರ ಬಳಿ ಹೇಗೆ ನಡೆದುಕೊಳ್ಳುತ್ತಾರೆಂದು ಆರೋಪಿಸಿ ಆರೋಗ್ಯ ಸಚಿವ ಖಾದರ್ ಅವರಿಗೆ ಪತ್ರ ಬರೆದಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement