ಗುಂಡಳ್ಳಿ: ವೇಗಧೂತ ಬಸ್‌ಗಳ ನಿಲುಗಡೆ
ಯಾದಗಿರಿ: ಶಹಾಪುರ ತಾಲೂಕಿನ ಗುಂಡಳ್ಳಿ ಗ್ರಾಮಕ್ಕೆ ವೇಗಧೂತ ಬಸ್‌ಗಳನ್ನು ನಿಲುಗಡೆಗೆ ಮಾಡುತ್ತಿರುವುದಕ್ಕೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ. ಗ್ರಾಮಸ್ಥರು ಘಟಕ ವ್ಯವಸ್ಥಾಪಕರಿಗೆ ಹಾಗೂ ಕೆಎಸ್‌ಆರ್‌ಟಿಸಿ ಅಧಿಕಾರಿಗೆ ಮನವಿ ಸಲ್ಲಿಸಿದ ಪ್ರಯುಕ್ತ ಶನಿವಾರ ಯಾದಗಿರಿಯಿಂದ ಶಹಾಪುರಕ್ಕೆ ತೆರಳುವ ಪ್ರಯಾಣಿಕರಿಗೆ, ಶಾಲಾ ವಿದ್ಯಾರ್ಥಿಗಳಿಗೆ ಗುಂಡಳ್ಳಿಯಿಂದ ಶಹಾಪುರ ಹಾಗೂ ಯಾದಗಿರಿಗೆ ಹೋಗಿ ಬರಲು ವೇಗಧೂತ ಮತ್ತು ಸಾಮಾನ್ಯ ಸಾರಿಗೆ ಬಸ್‌ಗಳನ್ನು ನಿಲುಗಡೆ ಮಾಡಿರುವು ದರಿಂದ ಬಹಳಷ್ಟು ಅನೂಕೂಲವಾಗಲಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಘಟಕದ ವ್ಯವಸ್ಥಾಪಕರಿಗೆ ಮತ್ತು ಅಧಿಕಾರಿಗಳಿಗೆ ಗ್ರಾಮಸ್ಥರು ಮತ್ತು ತಾಪಂ, ಗ್ರಾಪಂ ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.