ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಯಶಸ್ವಿನಿ ಯೋಜನೆ; ನೋಂದಣಿಗೆ ಸೂಚನೆ

Rashmi Kasaragodu
Updated On : 22 Jun 2014, 12:07 pm

ಯಾದಗಿರಿ: 2014-15ನೇ ಸಾಲಿನ ಗ್ರಾಮೀಣ ಮತ್ತು ನಗರ ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆಯಡಿ ಫಲಾನುಭವಿಗಳ ನೋಂದಣಿಗೆ ಜೂ.31 ಕೊನೆಯ ದಿನ. ನಗರ ಅಥವಾ ಗ್ರಾಮೀಣ ಪ್ರದೇಶದಲ್ಲಿ ಕೇಂದ್ರ ಸ್ಥಾನ ಹೊಂದಿರುವ ಸಹಕಾರ ಸಂಘಗಳಲ್ಲಿ ಸದಸ್ಯರಾಗಿ ಕನಿಷ್ಠ 3 ತಿಂಗಳಾಗಿರಬೇಕು. ಹೆಸರನ್ನು ನೋಂದಾಯಿಸಲು ಗ್ರಾಮೀಣ ಸಾಮಾನ್ಯ ವರ್ಗದ ಸದಸ್ಯರಿಗೆ ಶುಲ್ಕ 250, ಎಸ್‌ಸಿ- ಎಸ್ಟಿ ಸದಸ್ಯರಿಗೆ 50 ಶುಲ್ಕ ಭರಿಸಬೇಕು. ನಗರ ಪ್ರದೇಶದಲ್ಲಿ ನಗರ ಯಶಸ್ವಿನಿ ಯೋಜನೆಯಡಿ ನೋಂದಾಯಿಸಲು ಸಾಮಾನ್ಯ ವರ್ಗದ ಸದಸ್ಯರಿಗೆ ಶುಲ್ಕ 710, ಎಸ್‌ಸಿ- ಎಸ್ಟಿ ಸದಸ್ಯರಿಗೆ 510 ಶುಲ್ಕವನ್ನು ಭರಿಸಬೇಕಾಗಿರುತ್ತದೆ. ಮೇಲ್ಕಂಡ ಯೋಜನೆಯಡಿ ಸೌಲಭ್ಯ ಪಡೆಯುವ ಸದಸ್ಯರಿಗೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಕಾರಣ ಜಿಲ್ಲೆಯ ಎಲ್ಲ ತಾಲೂಕಿನ ನಗರ ಮತ್ತು ಗ್ರಾಮೀಣ ಪ್ರದೇಶಗಳ ಎಲ್ಲ ಸಹಕಾರ ಸಂಘಗಳಲ್ಲಿರುವ ಸದಸ್ಯರು ಯೋಜನೆಗಳ ಸೌಲಭ್ಯ ಪಡೆದುಕೊಳ್ಳಲು ಸಹಕಾರ ಸಂಘಗಳ ಉಪ ನಿಬಂಧಕರು ಕೋರಿದ್ದಾರೆ. ನೋಂದಣಿ ಅರ್ಜಿಗಳಿಗೆ ಸಹಕಾರ ಸಂಘಗಳ ಉಪ ನಿಬಂಧಕರು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement