ಅಲ್ಲಿಪುರ ಕರವೇ ಗ್ರಾಮ ಘಟಕ ಉದ್ಘಾಟನೆ
ಯಾದಗಿರಿ: ತಾಲೂಕಿನ ಅಲ್ಲಿಪುರದಲ್ಲಿ ಕರವೇ ನೂತನ ಘಟಕವನ್ನು ಜಿಲ್ಲಾಧ್ಯಕ್ಷ ಟಿ.ಎನ್. ಭೀಮುನಾಯಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ನಾಡಿನ ಸಂಸ್ಕೃತಿ ಹಳ್ಳಿಗಾಡುಗಳಲ್ಲಿ ಜೀವಂತವಾಗಿದೆ. ಯುವಜನರಲ್ಲಿ ನಮ್ಮ ನಾಡಿನ ಭಾಷಾಪ್ರೇಮ ಕಡಿಮೆಯಾಗುತ್ತಿರುವ ಕೊರತೆಯನ್ನು ಗ್ರಾಮೀಣ ಜನರು ನೀಗಿಸುವಲ್ಲಿ ನಮ್ಮೆಲ್ಲರಿಗೂ ಮಾದರಿಯಾಗಿದ್ದಾರೆ ಎಂದರು.
ಕರವೇ ನೆಲ-ಜಲ-ಭಾಷೆಯ ಅಭಿವೃದ್ಧಿಗೆ ನಿರಂತರ ಹೋರಾಟ ಮಾಡುತ್ತಿದೆ. ಯಾವುದೇ ಕೆಲಸ ಯಶಸ್ವಿಯಾಗಲು ಸಂಘಟನೆ ಮುಖ್ಯ. ಈ ನಿಟ್ಟಿನಲ್ಲಿ ಸಾರ್ವಜನಿಕರ ಕುಂದುಕೊರತೆ ನೀಗಿಸುವ ನಿಟ್ಟಿನಲ್ಲಿ ಕನ್ನಡ ನೆಲದ ರಕ್ಷಣೆಗೆ ಸದಾ ಕರವೇ ಸಿದ್ಧವಾಗಿದೆ ಎಂದು ಹೇಳಿದರು.
ಪದಾಧಿಕಾರಿಗಳು: ಮಾಳಪ್ಪ ಪೂಜಾರಿ- ಅಧ್ಯಕ್ಷ, ಶರಣಪ್ಪ ಶಿಪರ- ಗೌರವಾಧ್ಯಕ್ಷ, ಮಲ್ಲಪ್ಪ ಸದರಿ-ಉಪಾಧ್ಯಕ್ಷ, ಸಾಬಣ್ಣ ನಾಟೇಕರ್- ಸಂಘಟನೆ ಕಾರ್ಯದರ್ಶಿ, ಬಾಗಪ್ಪ ನಾಟೇಕರ್- ಪ್ರಧಾನ ಕಾರ್ಯದರ್ಶಿ, ಕಾಶಪ್ಪ ಡೊಕ್ಕೆನೂರ- ಸಲಹೆಗಾರು, ಹಣಮಂತ ಚಿರತಕನೋರ- ಸಂಚಾಲಕ, ಬಸಣ್ಣಗೌಡ ಬಲಕಲ್- ಖಜಾಂಚಿಯನ್ನಾಗಿ ನೇಮಕ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಗುರುನಾಥ ರಾಠೋಡ್, ತಾಪಂ ಸದಸ್ಯ ಹಂಪಯ್ಯ ಸದರಿ, ಮಲ್ಲು ವರ್ಕನಳ್ಳಿ, ಭೀಮಾಶಂಕರ ಹತ್ತಿಕುಣಿ, ವೆಂಕಟೇಶ ರಾಠೋಡ್, ಗ್ರಾಪಂ ಸದಸ್ಯ ಹಣಮಂತ ಎಲ್ಹೇರಿ ಮತ್ತಿತರರು ಇದ್ದರು.