ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಗುಲ್ಬರ್ಗಾ

ಬಾಲ ಕಾರ್ಮಿಕ ವಿರೋಧಿ ದಿನಾಚರಣೆ ಇಂದು

Rashmi Kasaragodu
Updated On : 23 Jun 2014, 11:04 am

ಸುರಪುರ: ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ಸಂಘ, ತಾಲೂಕು ಕಾನೂನು ಸೇವಾ ಸಮಿತಿ, ಕಾರ್ಮಿಕ ಇಲಾಖೆ, ವಕೀಲರ ಸಂಘದ ಆಶ್ರಯದಲ್ಲಿ ಸ್ಥಳೀಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ (ದರ್ಬಾರ್) ಯಲ್ಲಿ ಜೂ.23ರಂದು ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಹಮ್ಮಿಕೊಳ್ಳಲಾಗಿದೆ. ಬೆ.8ಕ್ಕೆ ಗಾಂಧೀಜಿ ವೃತ್ತದಲ್ಲಿ ನಾನಾ ಶಾಲೆಗಳ ಮಕ್ಕಳಿಂದ ಜಾಗೃತಿ ಜಾಥಾ ಆಯೋಜಿಸಲಾಗಿದೆ. ನಂತರ ದರ್ಬಾರ್ ಶಾಲೆಯಲ್ಲಿ ನ್ಯಾ. ಎಚ್.ದೇವರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಜಿಲ್ಲಾ ಬಾಲ ಕಾರ್ಮಿಕ ನಿರ್ಮೂಲನಾ ಯೋಜನಾ ನಿರ್ದೇಶಕ ರಘುವೀರಸಿಂಗ್ ಠಾಕೂರ್ ಪ್ರಮಾಣ ವಚನ ಬೋಧಿಸುವರು. ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ ಅಧ್ಯಕ್ಷತೆ ವಹಿಸುವರು. ನ್ಯಾಯಾಧೀಶರಾದ ಎಂ.ಶಶಿಧರಗೌಡ, ವಕೀಲರ ಸಂಘದ ಅಧ್ಯಕ್ಷ ಉದಯಸಿಂಗ್, ಬಿಇಒ ಎ.ವ್ಹಿ.ಕೆಂಪರಂಗಯ್ಯ. ತಡಾ. ಆರ್.ವಿ. ನಾಯಕ, ದೇನುಸಿಂಗ ಚವ್ಹಾಣ, ಏಜಾಜ್ ಹುಸೇನ್, ಎಸ್.ಎಚ್. ಹಕೀಮಸಾಬ್ ಆಗಮಿಸುವರು. ಮಹ್ಮದ್ ಹುಸೇನ್, ಶರ್ಮಿಳಾ ಎಸ್.ಎಂ, ಶ್ರೀದೇವಿ ಪಾಟೀಲ್ ಉಪನ್ಯಾಸ ನೀಡುವರು.
ಸಿಗದ 'ಖಾತ್ರಿ' ಕೂಲಿ ಹಣ
ಗುಳೆ ಹೊರಟ ಕಾರ್ಮಿಕರು
ಶಹಾಪುರ: ತಾಲೂಕಿನ ಗ್ರಾಪಂ.ಗಳಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಿದ ಕೂಲಿಕಾರರ ಬಿಲ್ ಪಾವತಿ ಮಾಡದೇ ಇರುವುರಿಂದ ಕಾರ್ಮಿಕರು ಬೇಸತ್ತು ಅನಿವಾರ್ಯವಾಗಿ ಹೊಟ್ಟೆಪಾಡಿಗಾಗಿ ಹೊರ ರಾಜ್ಯಗಳಿಗೆ ಗುಳೆ ಹೋಗುತ್ತಿದ್ದಾರೆ. ತಾಲೂಕಿನಲ್ಲಿ ಕಳೆದ ಏಳೆಂಟು ತಿಂಗಳಿಂದ ನರೇಗಾದಲ್ಲಿ ಕೆಲಸ ಮಾಡಿದ ಕೂಲಿಕಾರರಿಗೆ ಹಣ ನೀಡುತ್ತಿಲ್ಲ. ಹೀಗಾಗಿ ನಿತ್ಯ ಸಂಬಂಧಪಟ್ಟ ಅಧಿಕಾರಿಗಳಿಗೆ ವಿಚಾರಿಸಿ ಬೇಸತ್ತಿದ್ದಾರೆ. ಆದ್ದರಿಂದ ಕೂಲಿಕಾರರಿಗೆ ಹಣ ಪಾವತಿಸದೇ ಇರುವುದನ್ನು ತಕ್ಷಣ ಪರಿಶೀಲಿಸಿ ಹಣ ಪಾವತಿಸಲು ತಾಪಂ ಮತ್ತು ಗ್ರಾಪಂ ಪಿಡಿಒಗಳಿಗೆ ಆದೇಶ ನೀಡಬೇಕು. ಇಲ್ಲದಿದ್ದರೆ ಕೂಲಿಕಾರರ ಸಮೇತ ಜಯ ಕರ್ನಾಟಕ ತಾಲೂಕು ಘಟಕದ ವತಿಯಿಂದ ತಾಪಂ ಕಚೇರಿಗೆ ಬೀಗ ಜಡಿದು ಉಗ್ರವಾದ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಆಗ್ರಹಿಸಿ ಸಂಘಟನೆ ತಾಪಂ ಆಡಳಿತಕ್ಕೆ ಮನವಿ ಪತ್ರ ಸಲ್ಲಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement