ರಸ್ತೆ, ಚರಂಡಿ ಕಾಮಗಾರಿ ವೀಕ್ಷಿಸಿದ ಶಾಸಕರು
ಯಾದಗಿರಿ: ನಗರದಲ್ಲಿ 2ನೇ ಹಂತದ ನಗರೋತ್ಥಾನ ಯೋಜನೆ ಅಡಿಯಲ್ಲಿ ಆರಂಭವಾದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಶಾಸಕ ಡಾ. ಎ.ಬಿ. ಮಾಲಕರೆಡ್ಡಿ ವೀಕ್ಷಣೆ ಮಾಡಿ ಗುಣಮಟ್ಟ ಕಾಯ್ದುಕೊಳ್ಳಿ ಎಂದು ಅಧಿಕಾರಿಗಳಿಗೆ ಎಚ್ಚರಿಸಿದರು.
ನಗರದ ಮಾಣಿಕೇಶ್ವರಿ ಬಡಾವಣೆಯಲ್ಲಿ ನಡೆಯುತ್ತಿರುವ 2ನೇ ಹಂತದ ನಗರೋತ್ಥಾನ ಯೋಜನೆ ಅಡಿಯಲ್ಲಿ ಆರಂಭವಾದ ರಸ್ತೆ ಹಾಗೂ ಚರಂಡಿ ಕಾಮಗಾರಿಯನ್ನು ಇತ್ತೀಚೆಗೆ ವೀಕ್ಷಿಸಿ ನಂತರ ನಗರಸಭೆ ಅಧಿಕಾರಿಗಳು ಹಾಗೂ ಎಸ್.ಆರ್. ಕನ್ಸ್ಟ್ರಕ್ಷನ್ ಗುತ್ತಿಗೆದಾರರನ್ನು ಕುರಿತು ಮಾತನಾಡಿದರು. ನಗರಸಭೆ ಅಧಿಕಾರಿಗಳು, ಗುತ್ತಿಗೆದಾರರು, ಕಾಂಗ್ರೆಸ್ ಯುವ ಮುಖಂಡರಾದ ಶಾಂತಗೌಡ ಪಗಲಾಪುರ, ರಾಹುಲ್ಗೌಡ ಅರಿಕೇರಿ, ಸೋಮಶೇಖರ ಮಸ್ಕನಳ್ಳಿ, ಮಲ್ಲಿಕಾರ್ಜುನ ಥಳಕ್, ತಿಮ್ಮಣ್ಣ ಠಾಣಗುಂದಿ, ಶಿವಕುಮಾರ ಚಂಡ್ರಕಿ, ದೇವಪುತ್ರ, ರವಿಕೀರಣ ಗಂಟಿ ಇದ್ದರು