ವಾರ್ಡನ್ಗಳಿಗೆ ತರಬೇತಿ
ಯಾದಗಿರಿ: ಜಿಲ್ಲೆಯ ಸಮಾಜ ಕಲ್ಯಾಣ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ವಾರ್ಡನ್ಗಳಿಗೆ ಕರ್ತವ್ಯ ನಿರ್ವಹಣೆ ಕುರಿತು ಜೂ.25ರಂದು ಬೆಳಗ್ಗೆ 11ಕ್ಕೆ ಜಿಪಂ ಸಭಾಂಗಣದಲ್ಲಿ ತರಬೇತಿ ಹಮ್ಮಿಕೊಳ್ಳಲಾಗಿದೆ. ಕಾರ್ಯಾಗಾರವನ್ನು ಜಿಪಂ ಅಧ್ಯಕ್ಷ ಸಿದ್ದಣಗೌಡ ಪಾಟೀಲ್ ಉದ್ಘಾಟಿಸಲಿದ್ದಾರೆ. ಕಾರ್ಯಾಗಾರದಲ್ಲಿ ಪರಿಣಿತ ಉಪನ್ಯಾಸಕರಿಂದ ವೃತ್ತಿ ಬಗ್ಗೆ ಉಪನ್ಯಾಸ ನೀಡಲಾಗುವುದು ಎಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈಲು ಸೌಲಭ್ಯ ಹೆಚ್ಚಿಸಿ: ಮನವಿ
ಯಾದಗಿರಿ: ರೈಲು ದರವನ್ನು ಹೆಚ್ಚಿಸಿರುವ ಕೇಂದ್ರ ಸರ್ಕಾರ ರೈಲುಗಾಡಿ ಹಾಗೂ ನಿಲ್ದಾಣಗಳಲ್ಲಿನ ಅನೇಕ ಸಮಸ್ಯೆಗಳನ್ನು ಪರಿಹರಿಸಿ ಹೆಚ್ಚಿನ ಸೌಲಭ್ಯ ನೀಡುವಂತೆ ಜಿಲ್ಲಾ ಅಹಿಂದ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ. ವೆಂಕಟೇಶ ರೇಲ್ವೆ ಸಚಿವರಿಗೆ ಮನವಿ ಮಾಡಿದ್ದಾರೆ. ನೀರಿನ ಕೊರತೆ, ಇಲಿಗಳ ಕಾಟವಿದ್ದು ಇದನ್ನು ಪರಿಹರಿಸುವಂತೆ ತಿಳಿಸಿದ್ದಾರೆ.